ಉಡುಪಿ, ಜ.27: ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಅಂತಿಮ ಬಿ.ಕಾಂ ನ ಅಕ್ಷಯ ಹೆಗ್ಡೆ ಹಾಗೂ ಪ್ರಜ್ವಲ್ ನಾಯಕ್ ಆಯ್ಕೆಯಾಗಿದ್ದಾರೆ. ಮಂಗಳೂರು ವಿ ವಿ ತಂಡದ ನಾಯಕತ್ವವನ್ನು ಪ್ರಜ್ವಲ್ ನಾಯಕ್ ವಹಿಸಿಕೊಂಡಿದ್ದು, ಕಾಲೇಜಿನ ವತಿಯಿಂದ ಶುಭ ಹಾರೈಸಲಾಗಿದೆ. ಈ ಹಿಂದೆ ಕಾಲೇಜಿನ ಮಹಿಳೆಯರ ತಂಡ ದಕ್ಷಿಣ ವಲಯದಲ್ಲಿ ವಿವಿಯನ್ನು ಪ್ರತಿನಿಧಿಸಿದ್ದರು.
ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಗೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ದಕ್ಷಿಣ ವಲಯ ಅಂತರ್ ವಿವಿ ಚೆಸ್ ಪಂದ್ಯಾವಳಿಗೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ
Date: