Saturday, August 29, 2026
Saturday, August 29, 2026

ಆರೋಗ್ಯವಂತ ಜೀವನಶೈಲಿಯಿಂದ ಒತ್ತಡ ನಿರ್ವಹಣೆ ಸಾಧ್ಯ: ಡಾ. ಹರಿರಾಮ ಆಚಾರ್ಯ

ಆರೋಗ್ಯವಂತ ಜೀವನಶೈಲಿಯಿಂದ ಒತ್ತಡ ನಿರ್ವಹಣೆ ಸಾಧ್ಯ: ಡಾ. ಹರಿರಾಮ ಆಚಾರ್ಯ

Date:

ಗೋಪಾಲಪುರ: ಆರೋಗ್ಯವಂತ ಜೀವನಶೈಲಿಯಿಂದ ಒತ್ತಡ ನಿರ್ವಹಣೆ ಸಾಧ್ಯ ಎಂದು ಬೆಂಗಳೂರಿನ ನಾರಾಯಣ ಹ್ರ‍ದಯಾಲಯದ ನರರೋಗ ತಜ್ಞರಾದ ಡಾ. ಹರಿರಾಮ ಆಚಾರ್ಯ ಹೇಳಿದರು.

ಅವರು ಗೋಪಾಲಪುರ ಸಾರ್ವಜನಿಕ ನಾಗಬನದಲ್ಲಿ ’ಆರೋಗ್ಯವೇ ಐಶ್ವರ್ಯ ಅನ್ನುವುದು ಯಾಕೆ’? ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಎಷ್ಟೇ ಸಂಪತ್ತಿದ್ದರೂ ಆರೋಗ್ಯ ಕೈಕೊಟ್ಟರೆ ಎಲ್ಲವೂ ವ್ಯರ್ಥ. ಆರೋಗ್ಯವನ್ನು ಸುಧಾರಿಸಿ ಉತ್ತಮಪಡಿಸಲು ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು. ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ, ಉತ್ತಮ ಜೀವನಶೈಲಿ ಇವುಗಳಿಂದ ಒತ್ತಡರಹಿತ ಜೀವನ ನಡೆಸುಬಹುದು.

ದೈನಂದಿನ ದಿನಚರಿಗೆ ಅಂಟಿಕೊಂಡು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿದರೆ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದರು.

ಮೋಹನ್ ರಾವ್, ಭಜನಾ ಮಂಡಳಿಯ ಅಧ್ಯಕ್ಷೆ ಲತಾ, ಭಜನಾ ಮಂಡಳಿ ಸದಸ್ಯರು, ಸಾರ್ವಜನಿಕ ನಾಗಬನ ಸಮಿತಿ ಪದಾಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.

ಬಿ.ಪಿ. ಭಂಡಾರಿ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ...

ಗಂಗೊಳ್ಳಿ: ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಗಂಗೊಳ್ಳಿ, ಆ.28: ಶ್ರೀ ನಾರಾಯಣ ಗುರು ಜನ ಸೇವಾ ಬಳಗ ಗಂಗೊಳ್ಳಿ...

ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ

ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು,...

ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ; ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

ಕಾರ್ಕಳ, ಆ.27: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ...
error: Content is protected !!