Tuesday, April 21, 2026
Tuesday, April 21, 2026

ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹಡಿಲು ಭೂಮಿ ಕೃಷಿ ವೇದಿಕೆಯಾಗಲಿ: ಸಚಿವ ಮಾಧುಸ್ವಾಮಿ

ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹಡಿಲು ಭೂಮಿ ಕೃಷಿ ವೇದಿಕೆಯಾಗಲಿ: ಸಚಿವ ಮಾಧುಸ್ವಾಮಿ

Date:

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕಕ್ಕುಂಜೆ ವಾರ್ಡಿನಲ್ಲಿ 60 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದ್ದು, ಕಕ್ಕುಂಜೆ ಬೈಲಿನಲ್ಲಿ ಹಡಿಲು ಭೂಮಿ ಕೃಷಿ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಸಣ್ಣ ನೀರಾವರಿ ಸಚಿವರಾದ ಜೆ. ಸಿ ಮಾಧುಸ್ವಾಮಿ, ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಹಾಗೂ ಅಂಬಾಗಿಲು ಪ್ರಭು ಟ್ರೇಡರ್ಸ್ ಮಾಲಕರಾದ ಕೆ.ಬಿ. ಸೀತಾರಾಮ ಪ್ರಭು ಅವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಭೂಮಿಗೆ ಹಾಲನ್ನು ಅರ್ಪಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ಬಂಜರು ಭೂಮಿಯನ್ನು ವಿವಿಧ ಕಾರಣಗಳಿಂದ ಬಳಸಲಾಗಿಲ್ಲ. ನಾಡಿನ ರೈತರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕೃಷಿಗೆ ಉತ್ತೇಜನ ನೀಡುವ ಕಾರ್ಯಗಳಾಗಬೇಕಿದೆ. ಶಾಸಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಯೋಜನೆ ಮಾದರಿಯಾಗಿದೆ. ಕೇದಾರೋತ್ಥಾನ ಟ್ರಸ್ಟ್ ರಚಿಸಿ ಇದರ ಮೂಲಕ ಹಲವಾರು ವರ್ಷಗಳಿಂದ ಹಡಿಲು ಬಿಟ್ಟ ಭೂಮಿಯನ್ನು ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಯುವಕ-ಯುವತಿಯರನ್ನು ಒಟ್ಟುಗೂಡಿಸಿಕೊಂಡು ಸಾವಯವ ಕೃಷಿ ಮಾಡುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ. ಯುವ ಸಮುದಾಯವನ್ನು ಕೃಷಿಯತ್ತ ಸೆಳೆದಿರುವುದು ಉತ್ತಮ ಬೆಳವಣಿಗೆ. ಇನ್ನಷ್ಟು ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹಡಿಲು ಭೂಮಿ ಯೋಜನೆ ವೇದಿಕೆಯಾಗಲಿ ಎಂದರು.

ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಳೀಯ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣದ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ

ಕೋಟ, ಏ.20: ಹೆದ್ದಾರಿ ಬದಿಯಲ್ಲಿ ಕಸದ ಕೊಂಪೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು...

ಶ್ರೀ ಅಮೃತೇಶ್ವರಿ ಜೋಗಿ ಮಹಿಳಾ ವೇದಿಕೆ ಉದ್ಘಾಟನೆ

ಕೋಟ, ಏ.20: ಶ್ರೀ ಅಮೃತೇಶ್ವರಿ ಜೋಗಿ ಮಹಿಳಾ ವೇದಿಕೆ ಉದ್ಘಾಟನಾ ಕಾರ್ಯಕ್ರಮ...

ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸಲು ಭಾರತ ಮತ್ತು ದಕ್ಷಿಣ ಕೊರಿಯಾ 4 ಒಪ್ಪಂದಗಳಿಗೆ ಸಹಿ

ನವದೆಹಲಿ, ಏ.20: ಕ್ರೀಡೆ, ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು, ಸಣ್ಣ ಮತ್ತು...

ಚಾರಣಕ್ಕೆ ತೆರಳಲು ಪಾಲಕರ, ಪೋಷಕರ ಅನುಮತಿ ಕಡ್ಡಾಯ: ಅರಣ್ಯ ಸಚಿವ

ಬೆಂಗಳೂರು, ಏ.20: ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ...
error: Content is protected !!