Thursday, April 23, 2026
Thursday, April 23, 2026

ಬ್ರಹ್ಮಾವರ: 19ನೇ ವರ್ಷದ ವೈದ್ಯರ ದಿನಾಚರಣೆ

ಬ್ರಹ್ಮಾವರ: 19ನೇ ವರ್ಷದ ವೈದ್ಯರ ದಿನಾಚರಣೆ

Date:

ಕರ್ನಾಟಕ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ 19ನೇ ವರ್ಷದ ವೈದ್ಯರ ದಿನಾಚರಣೆ ಕಾರ್ಯಕ್ರಮ ಭಾನುವಾರ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಮುಖ್ಯ ಅತಿಥಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಮಾತನಾಡಿ, ವೈದ್ಯರ ಸೇವೆ ಎಲ್ಲರ ಸೇವೆಗಿಂತ ಅತ್ಯಂತ ಶ್ರೇಷ್ಠವಾದದ್ದು, ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಸೇವೆಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದ ಅವರು ವೈದ್ಯರ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದರು.

ಹಿರಿಯ ವೈದ್ಯ ಡಾ. ಕೆ.ಪಿ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಎಂ.ರಾಜಗೋಪಾಲ ಅಡಿಗ ಹಾಗೂ ಬಹುಮುಖ ಪ್ರತಿಭೆಯ ವೈದ್ಯರಾದ ಡಾ. ಹೇಮಂತ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಹೇಮಂತ್ ಕುಮಾರ್, ವೈದ್ಯರು ಕೋವಿಡ್ ಸಂದರ್ಭದಲ್ಲಿ ವೃತ್ತಿ ಧರ್ಮ ಮರೆಯದೆ ಸೇವೆ ಮಾಡುತ್ತಿದ್ದಾರೆ. ವೈದ್ಯರು ರೋಗಿಗಳ ಎದುರು ನಗುತಾ ಮಾತನಾಡಿದರೂ ಆ ನಗುವಿನ ಹಿಂದೆ ನೋವಿದೆ. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡನೀಯ ಎಂದರು.

ವೇದಿಕೆಯಲ್ಲಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್, ಕಾರ್ಯದರ್ಶಿ ಪ್ರಸನ್ನ ಕಾರಂತ್, ಔಷಧ ಉದ್ಯಮಿ ವಿಫ್ನೇಶ್ವರ ಅಡಿಗ ಮುಂತಾದವರಿದ್ದರು.

ಮಾಧವ ಉಪಾಧ್ಯ ಮತ್ತು ಅನಂತಕೃಷ್ಣ ಹೊಳ್ಳ ಅತಿಥಿಗಳನ್ನು ಪರಿಚಯಿಸಿದರು. ಸತೀಶ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಮಧುಸೂಧನ್ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಸುಂದರ ಪೂಜಾರಿ ಸ್ವಾಗತಿಸಿ, ಪ್ರಸನ್ನ ಕಾರಂತ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮನುಷ್ಯ ಮಾನವೀಯನಾಗುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಏ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು...

ಹ್ಯಾಕ್ ಫೆಸ್ಟ್ 2026

ಕಾರ್ಕಳ, ಏ.22: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಫೈನೈಟ್...

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಯಶಸ್ವಿನ ತಂತ್ರಗಳು

ಬಸ್ರೂರು, ಏ.22: ಶ್ರೀ ಶಾರದಾ ಕಾಲೇಜು ಬಸ್ರೂರು ಗ್ರಂಥಾಲಯ ಮತ್ತು ಮಾಹಿತಿ...

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ- ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಭಾರತೀಯ ಸೇನೆಯ ಕಠಿಣ ಎಚ್ಚರಿಕೆ

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಈ ದಿನದಂದು,...
error: Content is protected !!