Home ಸುದ್ಧಿಗಳು ಕ್ರೀಡೆ ಟೋಕಿಯೊ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಚಿನ್ನದ ಉಡುಗೊರೆ ನೀಡಿದ ಅವನಿ

ಟೋಕಿಯೊ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಚಿನ್ನದ ಉಡುಗೊರೆ ನೀಡಿದ ಅವನಿ

487
0

ಟೋಕಿಯೊ: ಪ್ಯಾರಾಲಿಂಪಿಕ್ಸ್ ಮಹಿಳಾ ವಿಭಾಗದ 10ಮೀ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಅವನಿ ಲೆಖಾರ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೋಮವಾರ ಅಸಾಕ ಶೂಟಿಂಗ್ ರೇಂಜ್ ನಲ್ಲಿ ನಡೆದ ಶೂಟಿಂಗ್ ಫೈನಲ್ ನಲ್ಲಿ 19ರ ಹರೆಯದ ಅವನಿ, ಸ್ವರ್ಣ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ನೂತನ ದಾಖಲೆಯನ್ನು ನಿರ್ಮಿಸಿದರು. ಚೀನಾದ ಕ್ಯೂಪಿಂಗ್ ಜಾಂಗ್ ಬೆಳ್ಳಿ ಪಡೆದರೆ, ಉಕ್ರೈನ್ ಶೂಟರ್ ಐರಿನಾ ಕಂಚಿಗೆ ತೃಪ್ತಿಪಟ್ಟರು.

ಚಕ್ರ ಎಸೆತದಲ್ಲಿ ಭಾರತದ ಯೊಗೇಶ್ ಕಥುನಿಯಾ ಅತ್ಯುತ್ತಮ ಪ್ರದರ್ಶನದ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಈ ಸುದ್ಧಿ ಪ್ರಕಟಗೊಳ್ಳುವ (ಸೋಮವಾರ ಬೆಳಿಗ್ಗೆ 8:45ರವರೆಗೆ) ಭಾರತಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ ಒಟ್ಟು 5 ಪದಕಗಳು ಲಭಿಸಿದ್ದು, ಇದರಲ್ಲಿ ತಲಾ ಒಂದು ಚಿನ್ನ, ಕಂಚು ಮತ್ತು ಮೂರು ಬೆಳ್ಳಿ ಪದಕಗಳು ಒಳಗೊಂಡಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.