Friday, September 4, 2026
Friday, September 4, 2026

ಭಾರತಕ್ಕೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿ

ಭಾರತಕ್ಕೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿ

Date:

ಯು.ಬಿ.ಎನ್.ಡಿ., ಮಾ.9: ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸುವ ಮೂಲಕ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ತನ್ಮೂಲಕ ಈ ಬಾರಿಯ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಗೆದ್ದು ನೂತನ ದಾಖಲೆ ನಿರ್ಮಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251ರನ್ ಗಳಿಸಿತು. ಡ್ಯಾರಲ್ ಮಿಷೆಲ್ 63 ರನ್ ಗಳಿಸಿದರೆ, ಬ್ರೇಸ್ವೆಲ್ ಅಜೇಯ 53 ರನ್ ಗಳಿಸಿದರು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಯಶಸ್ವಿಯಾದರು. ಕುಲ್ದೀಪ್ ಯಾದವ್ ಮತ್ತು ವರುಣ್ ತಲಾ 2 ವಿಕೆಟ್ ಪಡೆದರು. ಭಾರತ ತಂಡ ಅದ್ಭುತ ಕ್ಷೇತ್ರರಕ್ಷಣೆ ನಡೆಸುವ ಮೂಲಕ ನ್ಯೂಜಿಲೆಂಡ್ ಇಟ್ಟುಕೊಂಡಿದ್ದ ಬೃಹತ್ ರನ್ ಕಲೆಹಾಕುವ ಕನಸನ್ನು ಭಗ್ನಗೊಳಿಸಿತು.

ನ್ಯೂಜಿಲೆಂಡ್ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಅದ್ಭುತ ಆರಂಭವನ್ನು ಒದಗಿಸಿ ಕೊಡುವ ಮೂಲಕ ಗೆಲುವಿನ ಮುನ್ಸೂಚನೆ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 105 ರನ್ ಗಳ ಜತೆಯಾಟ ನೀಡಿತು. ನಾಯಕ ರೋಹಿತ್ ಶರ್ಮಾ 76 ರನ್ ಗಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಉತ್ತಮ ಫಾರ್ಮ್ ನಲ್ಲಿದ್ದ ಕೊಹ್ಲಿ ಕೇವಲ 1 ರನ್ ಗಳಿಸಿದರು. 105 ಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಆಡುತ್ತಿದ್ದ ಭಾರತ ತಂಡ ಮುಂದಿನ 17 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಾಗ ಪಂದ್ಯ ತಿರುವು ಪಡೆಯುವ ಎಲ್ಲಾ ಸಾಧ್ಯತೆಗಳಿದ್ದವು. ವಿಜಯಮಾಲೆ ಭಾರತದಿಂದ ನ್ಯೂಜಿಲೆಂಡ್ ನತ್ತ ವಾಲುವ ಸಾಧ್ಯತೆಯಿತ್ತು. ಬಳಿಕ ಜತೆಗೂಡಿದ ಶ್ರೇಯಸ್ ಐಯ್ಯರ್- ಅಕ್ಷರ್ ಪಟೇಲ್ ಜೋಡಿ ಜವಾಬ್ದಾರಿಯುತ ಆಟವಾಡುತ್ತಾ ಬಾಲ್ ರನ್ ಅಂತರ ಕಡಿಮೆಗೊಳಿಸುವಲ್ಲಿ ಮಗ್ನರಾದರು. ಶ್ರೇಯಸ್ ಐಯ್ಯರ್ 48 ರನ್ ಗಳಿಸಿ ನಿರ್ಗಮಿಸಿದರು. ಕೆ.ಎಲ್. ರಾಹುಲ್ ಎಂದಿನಂತೆ ಜವಾಬ್ದಾರಿಯುತವಾಗಿ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜಡೇಜಾ ಗೆಲುವಿನ ರನ್ ಹೊಡೆದರು.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಈಗ ಮತ್ತೊಮ್ಮೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿ ಗೆದ್ದು ಗೆಲುವಿನ ಯಾತ್ರೆಯನ್ನು ಭಾರತ ತಂಡ ಮುಂದುವರಿಸಿದೆ. ಈ ಪಂದ್ಯಾಕೂಟದಲ್ಲಿ 263 ರನ್ ಗಳಿಸಿ 2 ಶತಕ ಬಾರಿಸಿದ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...

ಪಡುಕರೆ: ಮುದ್ದುಕೃಷ್ಣ ವೇಷ ಸ್ಪರ್ಧೆ ಸಂಪನ್ನ

ಪಡುಕರೆ, ಸೆ.4: ಶ್ರೀ ಕೃಷ್ಣ ಮಾರುತಿ ವ್ಯಾಯಾಮ ಶಾಲೆ, ಕಡೆಕಾರು ಪಡುಕರೆ...
error: Content is protected !!