Home ಸುದ್ಧಿಗಳು ಕ್ರೀಡೆ ಡೈಮಂಡ್ ಲೀಗ್: ನೀರಜ್ ಚೋಪ್ರಾಗೆ ಎರಡನೇ ಸ್ಥಾನ

ಡೈಮಂಡ್ ಲೀಗ್: ನೀರಜ್ ಚೋಪ್ರಾಗೆ ಎರಡನೇ ಸ್ಥಾನ

ನೀರಜ್ ಚೋಪ್ರಾ 83.80 ಮೀಟರ್ ಎಸೆದರೆ, ವಡ್ಲೆಜ್ಚ್ 84.24 ಮೀಟರ್ ಪ್ರಯತ್ನದೊಂದಿಗೆ ಪ್ರಶಸ್ತಿ ಗೆದ್ದರು

271
0

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಸೆ. 17: ಒರೆಗಾನ್ನ ಯುಜೀನ್ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ 2023 ಫೈನಲ್ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ 83.80 ಮೀಟರ್ ಪ್ರಯತ್ನದೊಂದಿಗೆ ಎರಡನೇ ಸ್ಥಾನ ಪಡೆದರು. ನೀರಜ್ ಚೋಪ್ರಾ ಕಳೆದ ವರ್ಷ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು, ಆದರೆ ಹೇವಾರ್ಡ್ ಫೀಲ್ಡ್ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 2016 ಮತ್ತು 2017ರ ಡೈಮಂಡ್ ಲೀಗ್ ಚಾಂಪಿಯನ್ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ 84.24 ಮೀಟರ್ ಎಸೆದು ಮೂರನೇ ಬಾರಿಗೆ ಪ್ರಶಸ್ತಿ ಗೆದ್ದರು.

ಯುಜೀನ್ ನಲ್ಲಿ ಯಾವುದೇ ಕ್ರೀಡಾಪಟುಗಳು 85 ಮೀಟರ್ ಗಡಿ ದಾಟಲಿಲ್ಲ. 89.94 ಮೀಟರ್ ದೂರ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾ, ಕಳೆದ ವರ್ಷ ಇದೇ ಸ್ಥಳದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ 88.13 ಮೀಟರ್ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು.

ಜಾವೆಲಿನ್ ಫಲಿತಾಂಶ

ಹೆಸರು ದೇಶ ಎಸೆದ ದೂರ (ಮೀಟರ್ ಗಳಲ್ಲಿ)
ಜಾಕುಬ್ ವಡ್ಲೆಜ್ಚ್ ಜೆಕ್ ಗಣರಾಜ್ಯ 84.24
ನೀರಜ್ ಚೋಪ್ರಾ ಭಾರತ 83.80
ಆಲಿವರ್ ಹೆಲಾಂಡರ್ ಫಿನ್ ಲ್ಯಾಂಡ್ 83.74

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.