ಜಕಾರ್ತ: ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರೆಯ ಮಿತ್ರ ರಾಷ್ಟ್ರಗಳಿಗೆ ಭಾರತದ ಸಹಾಯಹಸ್ತ ಮುಂದುವರಿದಿದ್ದು, ಮಿಷನ್ ಸಾಗರ್ ಮೂಲಕ ಇಂಡೊನೇಷ್ಯಾಗೆ ಆಮ್ಲಜನಕ ಕಂಟೇನರ್ ಗಳನ್ನು ನೀಡಲಾಗಿದೆ.
10 ಆಮ್ಲಜನಕ ಕಂಟೇನರ್ ಗಳನ್ನು ಹೊತ್ತ ನೌಕಾಪಡೆಯ ಐ.ಎನ್.ಎಸ್. ಐರಾವತ ನೌಕೆಯು ಮಂಗಳವಾರ ಜಕಾರ್ತ ಬಂದರು ತಲುಪಿತು. ನೌಕೆಯನ್ನು ಇಂಡೊನೇಷ್ಯಾ ನೌಕಾಪಡೆಯ ಅಧಿಕಾರಿಗಳು ಬರಮಾಡಿಕೊಂಡರು.
ಮೇ 10 ರಂದು ಆರಂಭಗೊಂಡ ಮಿಷನ್ ಸಾಗರ್ ಮೂಲಕ ಮಿತ್ರ ರಾಷ್ಟ್ರಗಳಿಗೆ ಭಾರತ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದೆ. ಇಂಡೊನೇಷ್ಯಾ ಮತ್ತು ಭಾರತ ಜಂಟಿಯಾಗಿ ಈ ಹಿಂದೆ ನೌಕಾಪಡೆಯ ಸಮರಾಭ್ಯಾಸವನ್ನು ನಡೆಸಿದ್ದು ಉಭಯ ದೇಶಗಳು ಉತ್ತಮ ಬಾಂಧವ್ಯವನ್ನು ಹೊಂದಿದೆ.