Home ಓದುಗರ ಮನದಾಳ ಉತ್ತಮ ಗುಣಮಟ್ಟದ ಕಾಮಗಾರಿ ಶೀಘ್ರವಾಗಿ ನೆಡೆಸುವಂತೆ ಆಗ್ರಹ

ಉತ್ತಮ ಗುಣಮಟ್ಟದ ಕಾಮಗಾರಿ ಶೀಘ್ರವಾಗಿ ನೆಡೆಸುವಂತೆ ಆಗ್ರಹ

339
0

ಕರಾವಳಿ ಬೈಪಾಸ್ ಬಳಿ, ಮಲ್ಪೆಯಿಂದ ಮಣಿಪಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ತೋಡು ನಿರ್ಮಿಸಿ ಮೇಲ್ಭಾಗದಲ್ಲಿ ಸ್ಲ್ಯಾಬ್ ಹಾಕುವ ಕಾಮಗಾರಿ ನಡೆಯುತ್ತಿದೆ. ಒಮ್ಮೆ ಕಳಪೆ ಮಟ್ಟದ ಕಾಮಗಾರಿಯಿಂದ ಸ್ಲ್ಯಾಬ್ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಇದೀಗ ಮರುಕಾಮಗಾರಿಗೆ ಚಾಲನೆ ದೊರತರೂ ಸರಳು ಜೋಡಿಸಿಟ್ಟು ಬಹಳ ದಿನಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ಅಪಘಾತ ಸಂಭವಿಸುವ ವಲಯವಾಗಿ ಮಾರ್ಪಟ್ಟಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು. ಶೀಘ್ರವಾಗಿ ಸಂಚಾರಕ್ಕೆ ಹೆದ್ದಾರಿ ಅನುವು ಮಾಡಿಕೊಡಬೇಕೆಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.