Home ಓದುಗರ ಮನದಾಳ ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ; ಸೂಕ್ತ ಕ್ರಮ ಅನಿವಾರ್ಯ

ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ; ಸೂಕ್ತ ಕ್ರಮ ಅನಿವಾರ್ಯ

1070
0

ಶಿರ್ವ: ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗೂ ಪ್ಲಾಸ್ಟಿಕ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ಕಾಯಿಲೆಗಳ ಹಾವಳಿಯ ಭೀತಿ ಎದುರಾಗಿದೆ.

ಸುತ್ತಮುತ್ತ ದಿನನಿತ್ಯ ಓಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲಪತ್ತೆಯ ಭೂಮಿ ತ್ಯಾಜ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ.

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ಭೇಟಿ ಪ್ರದೇಶವನ್ನು ಸ್ವಚ್ಛಗೊಳಿಸಿದ್ದಾರೆ. ಇನ್ನು ಮುಂದೆ ಕಿಡಿಗೇಡಿಗಳು ಈ ರೀತಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಧಕ್ಕೆ ತರದಂತೆ ಕ್ರಮ ಕೈಗೊಳ್ಳಬೇಕು.

-ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್
ಉಪನ್ಯಾಸಕರು, ಸಂತ ಮೇರಿ ಕಾಲೇಜು, ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.