Home ಸುದ್ಧಿಗಳು ಪ್ರಾದೇಶಿಕ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು: ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಕಾರ್ಯಕ್ರಮ

ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು: ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಕಾರ್ಯಕ್ರಮ

155
0

ಶಿರ್ವ, ಏ.29: ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಸೋಮವಾರ ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಇವರ ವತಿಯಿಂದ ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಕಾರ್ಯಕ್ರಮ ನಡೆಯಿತು. ವಿಶೇಷ ಅತಿಥಿಗಳಾಗಿ ಸುಧೀರ್ ಬಾಳಿಗ, ಅಧ್ಯಕ್ಷರು-ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಮತ್ತು ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಇಲ್ಲಿನ ತರಬೇತುದಾರರಾಗಿರುವ ಪ್ರಶಾಂತ್ ಶೆಟ್ಟಿ ಹಾಗೂ ಪುಷ್ಪರಾಜ್ ಚೌಟ ಆಗಮಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಶಾಂತ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಮಾಹಿತಿಯನ್ನು ನೀಡಿದ್ದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಹೇಮಲತಾ ಶೆಟ್ಟಿ ಸ್ವಾಗತಿಸಿ, ಸಹ ಆಯೋಜಕರಾದ ರಶ್ಮಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.