ಉಡುಪಿ, ನ.13: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ. ಅರುಣಕುಮಾರ ಎಸ್. ಆರ್., ಸಹ ಸಂಶೋಧಕರು, ಆರ್.ಆರ್.ಸಿ (ಮಾಹೆ), ಎಂ.ಜಿ.ಎಂ ಕಾಲೇಜು ಆವರಣ ಇವರು ಪಾಲ್ಗೊಂಡರು. ಕನ್ನಡ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ. ಯುವ ಪೀಳಿಗೆಯು ಕನ್ನಡದ ಗೌರವವನ್ನು ಕಾಪಾಡಿ ಅದರ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ಅರುಣ್ ಕುಮಾರ್ ಎಸ್ .ಆರ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಹಾಗು ಬಿ.ಸಿ.ಎ ಸಂಯೋಜಕರಾದ ಡಾ. ಎಂ.ವಿಶ್ವನಾಥ ಪೈ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ದೀಪಿಕಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನುಪಮಾ ನಿರೂಪಿಸಿದರು. ಭೂಮಿಕಾ, ಪ್ರಸಿಜಾ, ತನ್ವಿ ನಾಡಗೀತೆಯನ್ನು ಹಾಡಿದರು. ಅತಿಥಿಗಳ ಪರಿಚಯವನ್ನು ಶ್ರೀರಾಮ್ ಮಾಡಿದರು. ಶ್ರೀಕರ ವಂದಿಸಿದರು.




By
ForthFocus™