Wednesday, September 9, 2026
Wednesday, September 9, 2026

ನಿಟ್ಟೆ ತಾಂತ್ರಿಕ ಕಾಲೇಜು: ‘ಶೀ ಲೀಡ್ಸ್: ಮಹಿಳಾ ಶಿಕ್ಷಕಿಯರಿಗಾಗಿ ನಾಯಕತ್ವ ಸಾಮರ್ಥ್ಯಗಳ ಅಭಿವೃದ್ಧಿ’ಕಾರ್ಯಕ್ರಮ

ನಿಟ್ಟೆ ತಾಂತ್ರಿಕ ಕಾಲೇಜು: ‘ಶೀ ಲೀಡ್ಸ್: ಮಹಿಳಾ ಶಿಕ್ಷಕಿಯರಿಗಾಗಿ ನಾಯಕತ್ವ ಸಾಮರ್ಥ್ಯಗಳ ಅಭಿವೃದ್ಧಿ’ಕಾರ್ಯಕ್ರಮ

Date:

ಕಾರ್ಕಳ, ನ.12: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರ (ಎಸ್.ಡಿ.ಸಿ), ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ವುಮನ್ ಇನ್ ಎಂಜಿನಿಯರಿಂಗ್ (WIE) ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ಹಾಗೂ ಕೆನರಾ ಬ್ಯಾಂಕ್, ನಿಟ್ಟೆಯ ಸಹಪ್ರಾಯೋಜಕತ್ವದಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ‘ಶೀ ಲೀಡ್ಸ್: ಡೆವಲಪಿಂಗ್ ಲೀಡರ್‌ಶಿಪ್ ಕಾಂಪಿಟೆನ್ಸೀಸ್ ಫಾರ್ ವುಮನ್ ಅಕಾಡೆಮಿಷಿಯನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ನವೆಂಬರ್ 10ರಿಂದ ಮೂರು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP)ವನ್ನು ಆಯೋಜಿಸಿತು.

ಕಾರ್ಯಕ್ರಮವನ್ನು ಸಿಂಬಯೋಸಿಸ್ ತಾಂತ್ರಿಕ ಸಂಸ್ಥೆ, ಪುಣೆಯ ಸಹಪ್ರಾಧ್ಯಾಪಕಿ ಡಾ. ರಾಹೀ ವಾಲಾಂಬೆ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಅಕಾಡೆಮಿಕ್ ಕ್ಷೇತ್ರದಲ್ಲಿ ನಾಯಕತ್ವದ ಮಹತ್ವವನ್ನು ವಿವರಿಸಿ, ಮಹಿಳಾ ಅಧ್ಯಾಪಕರನ್ನು ಹೊಸತನ ಹಾಗೂ ಮಾರ್ಗದರ್ಶನವನ್ನು ಸ್ವೀಕರಿಸಲು ಪ್ರೇರೇಪಿಸಿದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐಇಇಇ ಮಂಗಳೂರು ಉಪವಿಭಾಗದ ಚೇರ್ ಎಲೆಕ್ಟ್ ಡಾ. ವೇಣುಗೋಪಾಲ ಪಿ.ಎಸ್. ಮಾತನಾಡಿ ಈ ಉಪಕ್ರಮವನ್ನು ಮೆಚ್ಚಿ, ಸಹಕಾರ ಮತ್ತು ನಾಯಕತ್ವ ವೃದ್ಧಿಯಲ್ಲಿ ಐಇಇಇಯ ಪಾತ್ರವನ್ನು ವಿವರಿಸಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶ್ಮುಖ ಅವರು ಉಪಸ್ಥಿತರಿದ್ದರು. ಸುಮಾರು 60 ಮಂದಿ ಈ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಅಶ್ವಿನಿ ಬಿ ಸ್ವಾಗತಿಸಿ, ಎಫ್‌ಡಿಪಿಯ ಉದ್ದೇಶಗಳನ್ನು ವಿವರಿಸಿದರು. ವಿಭಾಗದ ಪ್ರಾಧ್ಯಾಪಕಿ ಡಾ. ಮಂಜುಳಾ ಗುರುರಾಜ್ ರಾವ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ನವೀನ್ ಅವರು ಗೌರವ ಅತಿಥಿಯನ್ನು ಪರಿಚಯಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚಿನ್ಮಯಿ ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ವಿಮಾನ ಪ್ರಯಾಣ ಅಸ್ತವ್ಯಸ್ತ

ಯು.ಬಿ.ಎನ್.ಡಿ., ಸೆ.8: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಎಂಟು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು...

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಸಾಲ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ, ಸೆ.8: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ...
error: Content is protected !!