ಮಲ್ಪೆ, ನ.8: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಅಭ್ಯುದಯ ಸಮಾಜಕಾರ್ಯ ವೇದಿಕೆ ಆಯೋಜನೆಯಲ್ಲಿ ಅಭ್ಯುದಯ – 2025 (Addressing the hidden battle) ಎಂಬ ಥೀಮ್ ನೊಂದಿಗೆ ದಿನಾಂಕ 11.11.2025 ಮಂಗಳವಾರ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಂಗಳೂರು ವಿ.ವಿ ವಲಯದ ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ವಿಜ್, ಪೋಸ್ಟರ್ ಮೇಕಿಂಗ್, ಕೊಲಾಜ್ ಮೇಕಿಂಗ್, ಪಿಪಿಟಿ ಪ್ರೆಸೆಂಟೇಶನ್, ನೃತ್ಯಸ್ಪರ್ಧೆ, ಬೀದಿನಾಟಕ, ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.. ಒಟ್ಟು 12 ಕಾಲೇಜುಗಳು ನೋಂದಣಿಯಾಗಿದ್ದು ಅಭ್ಯುದಯ-2025 ರಲ್ಲಿ ಭಾಗವಹಿಸಲಿವೆ.
ಉದ್ಘಾಟಕರಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಸಮಗ್ರ ಬಹುಮಾನ ಪ್ರಥಮ ರೂ. 15,015, ದ್ವಿತೀಯ ಬಹುಮಾನ ರೂ.10,010 ಹಾಗೂ ತೃತೀಯ ಬಹುಮಾನ ರೂ 5,005 ಮೊತ್ತ ನಿಗದಿಯಾಗಿದ್ದು, ಪ್ರತಿ ಸ್ಪರ್ಧೆಗಳಿಗೂ ವೈಯುಕ್ತಿಕ ಹಾಗೂ ಶಾಶ್ವತ ಫಲಕ ನೀಡಲಾಗುವುದು.




By
ForthFocus™