ಅದು ಯಾವುದೇ ನಕ್ಷೆಯಲ್ಲಿಲ್ಲದ, ಯಾವುದೇ ಪ್ರವಾಸಿ ಪಟದಲ್ಲಿ ಗುರುತಿಸದ ಒಂದು ಜಾಗ. ಹಸಿರು ಕಾನನದ ಉಸಿರಾಡುವ ಹೃದಯದೊಳಗೆ ತಾನು ಹುಟ್ಟಿಕೊಂಡಿರುವುದರ ಅರಿವಿಲ್ಲದೆ ನಿಸರ್ಗ ತನ್ನ ಭಾವನೆಗಳನ್ನೇ ಹರಿಸುತ್ತಿರುವ ಒಂದು ಹೆಸರಿಲ್ಲದ ಜಲಪಾತ.
ಹೆಸರಿಲ್ಲ… ಆದರೆ ಅದರ ಹರಿವಿಗೆ ಶಬ್ದವಿದೆ. ಮೌನದೊಳಗಿನ ಸಂಗೀತವಿದೆ. ಚುಂಬನೆಯಂತೆ ಮರಗಳ ಎದೆಹೆತ್ತಲ್ಲಿ ಎರೆಯುತ್ತಿರುವ ಈ ಜಲಪಾತ, ಕೇವಲ ನೀರಿನ ಹರಿವಲ್ಲ, ಅದು ಭಾವನೆಗಳ ಹರಿವು.
ಮಂದವಾಗಿ ಬೀಳುವ ಹನಿ ಹೊಳೆಯು ಕಲ್ಲುಗಳನ್ನು ತಣಿದ ಹೃದಯಗಳಂತಿವೆ. ಪ್ರತಿ ಹನಿಯೂ ಮಾನವನ ಆತ್ಮದ ತಾಪಕ್ಕೆ ತಂಪೆತ್ತುವಂತಹ ಶುದ್ಧವಾದ ತ್ರಾಣ. ಇದರ ಮುಂದೆ ನಿಲ್ಲುವವನು ಹೃದಯ ತೊಳೆದುಕೊಂಡು, ನಿಜವಾದ ಶಾಂತಿಯನ್ನು ಅನುಭವಿಸುತ್ತಾನೆ. ಇಲ್ಲಿ ನೂರು ಮಾತುಗಳು ಸದ್ದು ಮಾಡುವುದಿಲ್ಲ, ಒಂದು ನೋಟವೇ ಸಾಕು!
ಪಕ್ಕದಲ್ಲೇ ಕೂತಿರುವ ಹಳೆಯ ಮರ –ಬಹುಶಃ ಈ ಜಲಪಾತದ ಮೊದಲ ಪ್ರೇಮಿ. ಅದು ನೋಡುತ್ತಲೇ ಇರುತ್ತದೆ. ವರ್ಷಗಳಿಂದ ಕಾಳಜಿ ತುಂಬಿ. ಪರ್ವತದ ಹೃದಯದಿಂದ ಹರಿದುಬರುವ ಈ ನೀರು, ಧರೆ ತಲುಪುವ ಹೊತ್ತಿಗೆ ನಾನಾವವನು ಶುದ್ಧಗೊಳ್ಳುತ್ತಾನೋ ಎಂಬ ಅನುಮಾನವೇ ಇಲ್ಲ.
ಪರವಶನಾಗಿ ನಿಂತು ನೋಡುತ್ತಿದ್ದಾಗ ಹೃದಯ ಹೀಗೆ ಹೇಳುತ್ತದೆ –
“ಈ ಜಲಪಾತದ ಹೆಸರು ಇರದಿರಬಹುದು, ಆದರೆ ಇಲ್ಲಿ ಮನಸ್ಸಿಗೆ ಸಿಗುವ ಶಾಂತಿ ಎಲ್ಲಿಗೆ ಸಿಗಲ್ಲ. ಇದು ನಿಸರ್ಗದ ತಾಯಿಯ ಮುದ್ದಿನ ಮಗು – ನಿಷ್ಕಲ್ಮಷ, ನಿಜವಾದ, ಭಾವಪೂರ್ಣ.
ರಾಮ್ ಅಜೆಕಾರು ಕಾರ್ಕಳ




By
ForthFocus™