Saturday, September 5, 2026
Saturday, September 5, 2026

ಪೋಷಕರೇ ರಾಕ್ಷಸರಾದಾಗ

ಪೋಷಕರೇ ರಾಕ್ಷಸರಾದಾಗ

Date:

ಹಾರಾಷ್ಟ್ರದಲ್ಲಿ ಮಗಳು ನೀಟ್ ಮಾಕ್ ಟೆಸ್ಟ್ ನಲ್ಲಿ ಕಡಿಮೆ ಅಂಕ ಗಳಿಸಿದಳೆಂದು ಕೋಲಿನಿಂದ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಳು. ತಂದೆ ಅನ್ಎಜುಕೇಟೆಡ್ ಏನಲ್ಲ. ನಿಮಗೆ ಆಶ್ಚರ್ಯವಾಗಬಹುದು ತಂದೆ ಶಾಲೆಯೊಂದರ ಪ್ರಾಂಶುಪಾಲರಂತೆ. ಒಂದು ಮಗುವಿನ ಅಪ್ಪ ಆಗಿ ಸ್ಕೂಲಿನ ಪ್ರಿನ್ಸಿಪಲ್ ಆಗಿ ಈ ರೀತಿಯ ವರ್ತನೆ ಬೆಚ್ಚಿ ಬೀಳಿಸುತ್ತದೆ. ಒಳ್ಳೆಯ ಸಮಾಜವನ್ನು ಸೃಷ್ಟಿಸಬೇಕಾದ ಜವಾಬ್ದಾರಿ ಇದ್ದವರು ಹೀಗೆ ಕ್ರೂರ ಕೃತ್ಯ ಮಾಡಿದರೆ ಸಮಾಜದಲ್ಲಿ ಇನ್ನೇನು ಉಳಿದಿದೆ ಹೇಳಿ?

ಮಗಳಿಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.92 ಬಂದಿರುತ್ತದೆ. ಮನೆಯಲ್ಲಿ ದಿನಾಲು ಅವಳ ಅಪ್ಪ ನಿನಗೆ ಮಾರ್ಕ್ಸ್ ಕಮ್ಮಿ ಬಂದಿದೆ ಆ ಸಬ್ಜೆಕ್ಟ್ ಅಲ್ಲಿ ಕಮ್ಮಿ ಆಯ್ತು, ಈ ಸಬ್ಜೆಕ್ಟ್ ಅಲ್ಲಿ ಜಾಸ್ತಿ ಓದು. ಇದೇ ಕಿರಿಕಿರಿ ನಡೆಯುತ್ತಿತ್ತಂತೆ. ಮಗಳಿಗೆ ಡಾಕ್ಟರ್ ಆಗ ಬೇಕೆಂಬ ಆಸೆ. ನೀಟ್ ಕೋಚಿಂಗ್ ಸೇರಿದಳು. ಶಾಲೆಯಲ್ಲಿ ಕಾಲೇಜ್ ನಲ್ಲಿ ನಡೆದ ಮೊಕ ಟೆಸ್ಟ್ನಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಅವಳ ತಂದೆ ಕಿರಿಕಿರಿ ಮಾಡಲು ಹೊಡೆಯಲು ಬಡೆಯಲು ಶುರು ಮಾಡುತ್ತಾನೆ. ಆಗ ಹೊಡೆತಕ್ಕೆ ಸಾಕಾಗಿ ಮಗಳು ಅಪ್ಪನಿಗೆ ನಿನಗೂ ಕೂಡ ಕಮ್ಮಿ ಮಾರ್ಕ್ಸ್ ಬಂದಿತ್ತಲ್ವಾ ನೀನು ಕಲೆಕ್ಟರ್ ಆಗಿದ್ಯಾ ಎಂದು ಕೇಳಿದ್ದಾಳೆ. ಇದು ಅಪ್ಪನ ಅಹಂಕಾರವನ್ನು ಕೆರಳಿಸಿದೆ. ಕಲ್ಲು ಗ್ರೈಂಡರ್ ನ ಮರದ ಕೋಲಿನಿಂದ ಥಳಿಸಿದ್ದಾರೆ, ಇದರ ಪರಿಣಾಮ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಂಕಗಳೇ ಜೀವವಾಗಿದೆ. ಇಲ್ಲಿ ಮಕ್ಕಳು ಮುಗ್ಧರು. ಕೌನ್ಸಿಲಿಂಗ್ ಬೇಕಾಗಿರೋದು ಮಕ್ಕಳ ತಂದೆ ತಾಯಂದಿರಿಗೆ. ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿಗೆ ಪ್ರತಿಷ್ಠೆಯ ಪ್ರಶ್ನೆ. ಮಕ್ಕಳ ಜೀವ ಹೋದರು ತೊಂದರೆ ಇಲ್ಲ, ಭಾವನೆಗಳಿಗೆ ಧಕ್ಕೆಯಾದರೂ ತೊಂದರೆ ಇಲ್ಲ, ಆದರೆ ಸಮಾಜಕ್ಕೆ ತನ್ನ ಮಗ ಅಥವಾ ಮಗಳು ಲಕ್ಷಗಟ್ಟಲೆ ಸಂಬಳ ಬರುವ ವೃತ್ತಿಯನ್ನು ಸೇರಬೇಕು. ಇಲ್ಲಿಂದ ಶುರುವಾಗುವುದು ಅಂಕಗಳ ಸ್ಪರ್ಧೆ. ಅವರೆಲ್ಲ ಬದುಕುತ್ತಾ ಇರುವುದು ಮನುಷ್ಯತ್ವವಿಲ್ಲದ ಒಣ ಪ್ರತಿಷ್ಠೆಗೋಸ್ಕರ. ನಮ್ಮನ್ನೇ ತಿಂದು ಹಾಕುವ ಪ್ರತಿಷ್ಠೆಗೋಸ್ಕರ. ಪೋಷಕರಾದವರು ತನ್ನ ಮಕ್ಕಳನ್ನು ಜೋಪಾನವಾಗಿ ಪ್ರೀತಿಯಿಂದ ಬೆಳೆಸುವುದು ಕರ್ತವ್ಯ. ಮಕ್ಕಳು ತನ್ನ ಸ್ವತ್ತು ಎಂದು ಹೇಗೆ ಬೇಕಾದರೂ ಏನು ಬೇಕಾದರೂ ಮಾಡಬಹುದು ಎಂದು ವಿಪರೀತ ಹೊಡೆದರೆ ಅಲ್ಲಿ ರಾಕ್ಷಸರಾಗುತ್ತೇವೆ. ನಮಗೆ ದೇವರು ಮಕ್ಕಳು ಕೊಟ್ಟಿರುವುದು ಅವರು ದೊಡ್ಡವರಾಗುವವರೆಗೆ ಜೋಪಾನದಿಂದ ಪೋಷಿಸಲಿಕ್ಕೆ ಅಷ್ಟೇ. ಅವರ ಸ್ವಪ್ನಗಳನ್ನು ಸಾಕಾರ ಮಾಡಲು ಸಹಾಯ ಮಾಡಲಿಕ್ಕೆ ವಿನಹ ಮಕ್ಕಳು ನಮ್ಮ ಆಸ್ತಿ ಎಂದು ನಮ್ಮ ಕೈಗೊಂಬೆಯಾಗಿ ಬಳಸಲು ಅಲ್ಲ. ಮಕ್ಕಳಿಗೂ ಭಾವನೆಗಳು ಆಸೆಗಳು ಅವರದೇ ಆದ ವ್ಯಕ್ತಿತ್ವಗಳು ಒತ್ತಡಗಳು ಇರುತ್ತದೆ. ಪೋಷಕರಾದವರು ಇದನ್ನು ಅಂಗೀಕರಿಸಬೇಕು. ಒಣ ಪ್ರತಿಷ್ಠೆಗೋಸ್ಕರ ತಮ್ಮ ಅಹಂಕಾರಗೋಸ್ಕರ ಮಕ್ಕಳ ಜೀವ ತೆಗೆಯಬೇಡಿ.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!