Wednesday, July 29, 2026
Wednesday, July 29, 2026

ಜೀವನದಲ್ಲಿ ಎಷ್ಟು ಬೇಕು?

ಜೀವನದಲ್ಲಿ ಎಷ್ಟು ಬೇಕು?

Date:

ಕೌನ್ ಬನೇಗಾ ಕರೋಡ್ಪತಿಯಲ್ಲಿ ಸೈಂಟಿಸ್ಟ್, ಪಿಎಚ್‍ಡಿ, ಕೊಲ್ಕತ್ತಾದ ವೈಸ್ ಚಾನ್ಸಲರ್ ಆದ ಡಾ. ಸಕ್ಸೇನ ಎಂಬುವರು ವಿಶೇಷ ಗಮನ ಸೆಳೆದಿದ್ದಾರೆ. ಇವರು ತೋರಿಸಿದ ಮಾನವ ಗುಣ ನಮಗೆಲ್ಲರಿಗೂ ಒಂದು ಪಾಠ. ಇಲ್ಲಿ ಎರಡು ವಿಷಯಗಳು ಅಡಗಿವೆ. ಮೊದಲನೆಯದು 3,20,000 ಗೆದ್ದ ಇವರು ಮೂರು ಲೈಫ್ ಲೈನ್ ಗಳಿದ್ದರೂ ಮುಂದೆ ಆಡಬಹುದಿದ್ದರೂ ಆಡದೆ ತಮಗೆ ಬಂದ ಹಣದಲ್ಲಿ ತೃಪ್ತಿ ಇದೆ. ನನಗಿಂತ ಕಿರಿಯರು ಆಡಲು ಬಂದಿದ್ದಾರೆ ಅವರಿಗೆ ಅವಕಾಶ ಸಿಗಲಿ ಎಂದು ಹೇಳಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದರು. ಈ ರೀತಿಯ ವರ್ತನೆ ಇತರರ ಬಗ್ಗೆ ಇರುವ ಕಾಳಜಿ ಎಲ್ಲವೂ ತಮಗೆ ಬೇಕು ಎನ್ನುವ ಮನೋಭಾವ ಬಿಟ್ಟು ಇತರರಿಗೂ ಸಿಗಲಿ ಎಂಬ ಮನೋಭಾವವಿದೆಯಲ್ಲ ಅದು ನಮ್ಮನ್ನು ಮನುಷ್ಯನನ್ನಾಗಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ಎಲ್ಲವೂ ತಮ್ಮದಾಗಿಸುವ ಮನಸ್ಸು ಬೆಳೆಯುತ್ತಿದೆ. ಚಿಕ್ಕಂದಿನಿಂದ ಶಾಲಾ-ಕಾಲೇಜುಗಳಲ್ಲಿ ಕಾಂಪಿಟಿಷನ್ ಗಳಲ್ಲಿ ಭಾಗವಹಿಸುವ ಮಕ್ಕಳು ತಾವು ಸ್ಪರ್ಧಿಸಿದ ಎಲ್ಲಾ ಸ್ಪರ್ಧೆಗಳಲ್ಲಿಯೂ ಗೆಲ್ಲಬೇಕೆಂದು ಪ್ರಯತ್ನಪಡುತ್ತಾರೆ. ಮಕ್ಕಳಿಗಿಂತ ಅವರ ಪೋಷಕರು ತನ್ನ ಮಗುವಿಗೆ ಎಲ್ಲದರಲ್ಲೂ ಬಹುಮಾನ ಬೇಕೆಂದು ಆಶಿಸುತ್ತಾರೆ, ಸಿಗದಿದ್ದರೆ ಕೋಪಗೊಳ್ಳುತ್ತಾರೆ. ಈ ರೀತಿಯ ಮನೋಭಾವ ಮುಂದೆ ಮಕ್ಕಳು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುತ್ತಾರೆ.

ಇನ್ನೊಂದು ವಿಷಯ ಎಲ್ಲದರಲ್ಲೂ ಬಹುಮಾನ ಬೇಕು ಎಂದು ಹಂಬಲಿಸುವವರು ಇತರರಿಗೆ ಸಿಗಬಾರದು ಎಂದು ಯೋಚಿಸುವುದಿಲ್ಲವಾದರೂ ತಮಗೆ ಎಲ್ಲದರಲ್ಲೂ ಸಿಕ್ಕ ಬಹುಮಾನದಿಂದ ಬೇರೆಯವರಿಗೆ ಸಿಗುವಂತಹ ಅವಕಾಶ ಸಿಗದೇ ಹೋಗುತ್ತದೆ ಅಲ್ಲವೇ? ಭಾಗವಹಿಸುವುದು ತಪ್ಪಲ್ಲ. ತಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಅದು ತೀರ ಅಗತ್ಯ. ಆದರೆ, ಬಹುಮಾನ ನನಗೆನೇ ಬೇಕು ಎನ್ನುವ ಆಸೆ ಇರಕೂಡದು. ಬೇರೆಯವರಿಗೂ ಹಂಚಿ ಹೋಗಲಿ ಎಂಬ ಮನೋಭಾವ ಬೆಳೆಯಬೇಕು.

ಹಣದ ವಿಷಯ ಬಂದಾಗ ಕೇಳೋದೆ ಬೇಡ. ಆಸೆ ಎಂಬುದು ಎಂದೂ ಮುಗಿಯದ ಕಥೆ. ಗಳಿಸಿದಷ್ಟು ತೃಪ್ತಿ ಎಂಬುದಿಲ್ಲ. ಡಾ. ಸಕ್ಸೇನ ಅವರು ಎರಡು ಪಾಠವನ್ನು ಕಲಿಸಿದ್ದಾರೆ. ಜೀವನದಲ್ಲಿ ನಮಗೆಷ್ಟು ಬೇಕು ಎಷ್ಟು ಸಾಕು ಎನ್ನುವುದು. ಇನ್ನೊಂದು, ಇತರರಿಗೂ ಸಿಗಲಿ ಎನ್ನುವ ಮನೋಭಾವ. ಮಾನವೀಯ ಮೌಲ್ಯಗಳು ಚಿಕ್ಕಂದಿನಿಂದ ಬೆಳೆದು ಬರಬೇಕು. ಅದು ನಮ್ಮ ಪೋಷಕರಿಂದ ಶಿಕ್ಷಕರಿಂದ ಗೆಳೆಯರಿಂದ ಕಲಿತು ಹಾಗೂ ನಮ್ಮ ಸ್ವಂತ ಸ್ವಭಾವದಿಂದ ಬೆಳೆಸಬೇಕು. ಇಲ್ಲಿ ಒಂದು ಧ್ಯೇಯ ವಾಕ್ಯ ನೆನಪಿಗೆ ಬರುತ್ತದೆ. ‘ಸರ್ವೇ ಜನಃ ಸುಖಿನೋ ಭವಂತು’

-ಡಾ.ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...
error: Content is protected !!