Friday, February 27, 2026
Friday, February 27, 2026

ಜ.3- ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ

ಜ.3- ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ

Date:

ನವರಿ 3 ರಂದು ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ. ಈ ಸಂದರ್ಭ ಅತೀ ವಿರಳ. ಖಗೋಳದಲ್ಲಿ ಇದೊಂದು ವಿಶೇಷ ದಿನ. ಈ ದಿನ ಸೂರ್ಯನೂ ಸುಮಾರು 30 ಲಕ್ಷ ಕಿಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುವುದು., ಚಂದ್ರನೂ ಸುಮಾರು 27ಸಾವಿರ ಕಿಮೀ ಸಮೀಪ ಬಂದು ದೊಡ್ದಾಗಿ ಕಾಣುವುದು . ಈ ಘಟನೆ ನಡೆಯುವುದು ಒಂದೇ ದಿನ, ಅದೇ ವಿಶೇಷ.

ಜನವರಿ 3ರಂದು ಹುಣ್ಣಿಮೆ, ಹಾಗೂ ಸೂಪರ್ ಮೂನ್. ಇದು ಈ ವರ್ಷದ ಪ್ರಥಮ ಸೂಪರ್ ಮೂನ್. ಸೂಪರ್ಮೂನ್ ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27000 ಕಿಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30 ಅಂಶ ಹೆಚ್ಚಿನ ಹುಣ್ಣಿಮೆಯ ಬೆಳ್ಳಂ ಬೆಳಕಿಂದ ಬೆಳಗುತ್ತದೆ.
ಸೂರ್ಯನಲ್ಲೂ ಇಂದು ವರ್ಷದ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜನವರಿ 3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು ಸರಾಸರಿ ದೂರ 15 ಕೋಟಿ ಕಿಮೀ ಕ್ಕಿಂತ 14 ಕೋಟಿ 70 ಲಕ್ಷ ಕಿಮೀ ಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಗೆ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು.

ಈ ವರ್ಷ ಭೂಮಿ ಜನವರಿ 3 ಪೆರಿಜಿಗೆ ಬರುವುದು, ಜುಲೈ 6ರಂದು ಅಪೊಜಿಗೆ ಬರುವುದು. ಸೂರ್ಯ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘ ವೃತ್ತಾಕಾರವಾಗಿರುವುದೀ ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ. ಅದರಲ್ಲೂ ಈ ವರ್ಷ ಜನವರಿ 3 ರಂದು ಹುಣ್ಣಿಮೆ ಬಂದು ಸೂಪರ್ಮೂನ್ ಆಗಿರುವುದು ವಿಶೇಷ.

ಡಾ. ಎ.ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು

ಚೆನ್ನೈ, ಫೆ.26: ಇಲ್ಲಿಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್...

ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್‌: ಜ್ಞಾನಸುಧಾದ ೮ ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ, ಫೆ.26: ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು...

ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ‘ನಕಲಿ ವಿಶ್ವವಿದ್ಯಾಲಯ’ ಎಂದು ಯುಜಿಸಿ ಘೋಷಣೆ; ವಿದ್ಯಾರ್ಥಿಗಳು ಅದರಿಂದ ದೂರವಿರಲು ಸಲಹೆ

ಬೆಂಗಳೂರು, ಫೆ.26: ರಾಜಾಜಿನಗರದಲ್ಲಿರುವ ಬೆಂಗಳೂರು ಮೂಲದ 'ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ'ಯನ್ನು...
error: Content is protected !!