Saturday, February 7, 2026
Saturday, February 7, 2026

ದೀಪಾವಳಿಗೆ ಅಲೆಮಾರಿ ಆಕಾಶಕಾಯಗಳು

ದೀಪಾವಳಿಗೆ ಅಲೆಮಾರಿ ಆಕಾಶಕಾಯಗಳು

Date:

ಗಿಂದ ಅಕ್ಟೋಬರ್ ಅಂತ್ಯಕ್ಕೆ ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವ ಮೂರು ಧೂಮಕೇತುಗಳು ಗೋಚರಿಸಿವೆ. ಅವು ‘ಲೆಮೆನ್ ‘, ‘ಸ್ವಾನ್’ ಹಾಗೂ ‘ಅಟ್ಲಸ್’. ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ. ಲೆಮೆನ್ ಅಕ್ಟೋಬರ್ 21ರಂದು ಭೂಮಿಗೆ ಸುಮಾರು 90 ಮಿಲಿಯ ಕೀಮೀ ಸಮೀಪ ಬಂದು ಸಂಜೆಯ ಕೆಲ ಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ.

ನವಂಬರ್ 8 ರಂದು ಸೂರ್ಯ ಸಮೀಪ ತಲುಪಿ ಹಿಂತಿರುಗುತ್ತದೆ. ಸುಮಾರು 1350 ವರ್ಷಗಳಿಗೊಮ್ಮೆ ಈ ಲೆಮೆನ್ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತಿದೆ. ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರೀ ವಿಶೇಷ. ಅದು ಉಳಿದ ಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆ ನಮ್ಮ ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ಬಂದುದಲ್ಲ. ಈ ಅಟ್ಲಸ್ ನಮ್ಮ ಸೌರವ್ಯೂಹ ದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎಂದು ತಿಳಿದಿದೆ. ಅದರ ಅಧ್ಯಯನ ಹೊಸ ಹೊಸ ವಿಚಾರಗಳನ್ನು ಉಸುರಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ. ಚಂದ್ರನನ್ನ ಬಿಟ್ಟರೆ ರಾತ್ರಿಯ ಆಕಾಶದಲ್ಲಿ ಧೂಮಕೇತುಗಳೇ ಚೆಂದ. ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲಬೆಳೆಸಿಕೊಂಡು ಖಗೋಳ ವೀಕ್ಷಕನ ಮನಸೂರೆಗೊಳ್ಳುತ್ತವೆ. ಈಗ ಈ ಧೂಮಕೇತುಗಳೂಂದಿಗೆ ಪ್ರತಿ ವರ್ಷ ಈ ಸಮಯದಲ್ಲಿ ಸಂಭವಿಸುವ ಹ್ಯಾಲಿ ಧೂಮಕೇತುವಿನ ದೂಳಿನ ಉಲ್ಕಾಪಾತ ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿವೆ.

-ಡಾ. ಎ ಪಿ ಭಟ್ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.6: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ...
error: Content is protected !!