Saturday, September 5, 2026
Saturday, September 5, 2026

ಕೋಟ ಜನತಾ ಸಂಸ್ಥೆ: ದೀಪಾವಳಿ ಸಡಗರ

ಕೋಟ ಜನತಾ ಸಂಸ್ಥೆ: ದೀಪಾವಳಿ ಸಡಗರ

Date:

ಕೋಟ, ಅ.20: ಜನತಾ ಫಿಶ್ ಮೀಲ್ ಕೋಟ ಪಡುಕರೆಯಲ್ಲಿ ದೀಪಾವಳಿಯ ಪ್ರಯುಕ್ತ ‘ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನತಾ ಸಂಸ್ಥೆ ಒಂದು ಕುಟುಂಬವಿದ್ದಂತೆ ಹೀಗಾಗಿ ಹಬ್ಬಹರಿದಿನಗಳಂದು ನಾವೆಲ್ಲ ಒಟ್ಟಾಗಿ ಬೆರೆತು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ ಕುಂದರ್, ರಕ್ಷಿತ್ ಎ. ಕುಂದರ್, ಮುಖ್ಯ ಅತಿಥಿಗಳಾಗಿ ಉದ್ಯಮಿ ಅಣ್ಣಪ್ಪ ಶ್ರೀಯಾನ್ ಮತ್ತು ಆನಂದ ಪಿ.ಸುವರ್ಣ, ಜನತಾ ಸದಸ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಚಾರ್ವಿ ಕುಂದರ್, ಧನ್ಯತಾ ಕುಂದರ್ ಮತ್ತು ಅಕ್ಷರ ಕುಂದರ್ ಇವರಿಂದ ಯಕ್ಷಗಾನ ಕಾರ್ಯಕ್ರಮ ಮತ್ತು ಸಂಸ್ಥೆಯ ಸಿಬ್ಬಂದಿಗಳಿಂದ ಬಲೀಂದ್ರ ಪೂಜೆ, ನೃತ್ಯ, ಕುಣಿತ ಭಜನೆ, ಸಾಮಾಜಿಕ ನಾಟಕ ಮತ್ತು ನರಕಾಸುರ ವಧೆ ಎಂಬ ಪೌರಾಣಿಕ ನಾಟಕ ನಡೆಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!