ಕೊಲೊಂಬೊ: ದ್ವಿತೀಯ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 4 ವಿಕೆಟ್ಗಳಿಂದ ಜಯಗಳಿಸಿದೆ. ಟಾಸ್ ಗೆದ್ದು ಬೌಲಿಂಗ್ ನಡೆಸಲು ನಿರ್ಧರಿಸಿದ ಶ್ರೀಲಂಕಾ, ಭಾರತವನ್ನು 132 ರನ್ನುಗಳಿಗೆ ನಿಯಂತ್ರಿಸಿ ಗೆಲುವಿನ ಗುರಿಯನ್ನು ಸುಲಭವನ್ನಾಗಿಸಿತು.
ನಾಯಕ ಶಿಖರ್ ಧವನ್ 40 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 29 ರನ್ ಗಳಿಸಿದರು. ಶ್ರೀಲಂಕಾದ ಅಖಿಲ ಧನಂಜಯ ಎರಡು ವಿಕೆಟ್ ಪಡೆದು ಭಾರತದ ಬ್ಯಾಟ್ಸ್ಮೆನ್ ಗಳನ್ನು ಕಟ್ಟಿ ಹಾಕಿದರು. 20 ಓವರುಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಸುಲಭದ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾಗೆ ಆರಂಭಿಕ ಆಘಾತ ನೀಡುವಲ್ಲಿ ಭಾರತೀಯ ಬೌಲರ್ ಗಳು ಯಶಸ್ಸು ಕಂಡರೂ ಭಾನುಕ, ಧನಂಜಯ, ಹಸರಂಗ ಹಾಗೂ ಕರುಣರತ್ನೆ ಜವಾಬ್ದಾರಿಯುತವಾಗಿ ಆಟವಾಡಿ ಲಂಕೆಯನ್ನು ಗೆಲುವಿನ ದಡ ಸೇರಿಸಿದರು. 19.4 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ ಶ್ರೀಲಂಕಾ ಗೆಲುವಿನ ನಗೆಯನ್ನು ಬೀರಿತು.
ಸರ್ವಾಂಗೀಣ ಪ್ರದರ್ಶನಕ್ಕಾಗಿ ಧನಂಜಯ ಡಿಸಿಲ್ವ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸುವ ಮೂಲಕ ಅಂತಿಮ ಪಂದ್ಯದತ್ತ ಎಲ್ಲರ ಕುತೂಹಲ ಹೆಚ್ಚಾಗಿದೆ.