Saturday, September 12, 2026
Saturday, September 12, 2026

ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

Date:

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಡಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ 3 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ: ಅಕೌಂಟೆಂಟ್ ಕಂ ಕ್ಲರ್ಕ್/ ಸ್ಟೋರ್ ಕೀಪರ್‌ನ 1 ಹುದ್ದೆಗೆ ಬಿ.ಕಾಂ ಪದವಿ ಮತ್ತು ಕಂಪ್ಯೂಟರ್ ಅನುಭವ ಹೊಂದಿರುವವರು (ಮಾಸಿಕ ಗೌರವಧನ 12,000), ಕೃತಕಾಂಗ ಜೋಡಣೆ ಪಿ & ಓ ಅಭಿಯಂತರು 1 ಹುದ್ದೆಗೆ ಪಿ & ಓ ಇಂಜಿನಿಯರಿಂಗ್ ಪದವಿ/ ಡಿಪ್ಲೋಮಾ ವಿದ್ಯಾರ್ಹತೆ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷದ ಅನುಭವ ಹೊಂದಿರುವವವರು (ಮಾಸಿಕ ಗೌರವಧನ 25,000) ಹಾಗೂ ಮೊಬಿಲಿಟಿ ಇನ್ಸ್ಪೆಕ್ಟರ್ 1 ಹುದ್ದೆಗೆ ಸರ್ಟಿಫಿಕೇಟ್ ಕೋರ್ಸ್ ಇನ್ ಓ & ಎಂ ವಿದ್ಯಾರ್ಹತೆ ಹೊಂದಿರುವ (ಮಾಸಿಕ ಗೌರವಧನ 8,000 ರೂ.) ಅರ್ಹ ಅಭ್ಯರ್ಥಿಗಳು ಜುಲೈ 17 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರೆಡ್‌ಕ್ರಾಸ್ ಭವನ, ಅಜ್ಜರಕಾಡು ದೂರವಾಣಿ ಸಂಖ್ಯೆ: 0820-2533322, ಮೊ.ನಂ: 9845275841, 9886832008 ಅನ್ನು ಸಂಪರ್ಕಿಸುವಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!