Monday, December 22, 2025
Monday, December 22, 2025

ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನ

ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನ

Date:

ಉಡುಪಿ, ಸೆ.18: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರನೇಮಕಾತಿಗೆ ಸಂದರ್ಶನವು ಅಕ್ಟೋಬರ್ 9 ರಂದು ಬೆಳಗ್ಗೆ 10.30 ಕ್ಕೆ ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 18 ವರ್ಷ ಮೇಲ್ಪಟ್ಟ, ಉತ್ತಮ ಸಂವಹನ ಕೌಶಲ್ಯ ಹಾಗೂ ವಿಮಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹರು ಸಂದರ್ಶನ ನಡೆಯುವ ದಿನದಂದು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಜೀವವಿಮೆ ಅಭಿವೃದ್ಧಿ ಅಧಿಕಾರಿ, ಉಡುಪಿ ಅಂಚೆ ವಿಭಾಗ ಮೊ.ನಂ: 9482914676 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಗ್ರವಾದ ಮಟ್ಟಹಾಕಲು ಸಜ್ಜಾಗಿ: ಆಸ್ಟ್ರೇಲಿಯಾ ಪ್ರಧಾನಿ

ಸಿಡ್ನಿ, ಡಿ.21: ಕಳೆದ ವಾರದ ಬೋಂಡಿ ಬೀಚ್ ದಾಳಿಯ ನಂತರ ಆಸ್ಟ್ರೇಲಿಯಾದ...

ಇಸ್ರೋ ಸಂವಹನ ಉಪಗ್ರಹ ಬ್ಲೂಬರ್ಡ್ ಬ್ಲಾಕ್ -2 ಅನ್ನು ಉಡಾವಣೆಗೆ ಸಿದ್ಧತೆ

ನವದೆಹಲಿ, ಡಿ.21: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಸಂವಹನ...

ರೋಟರಿ ಸಮುದಾಯ ದಳ ಇನ್ನಂಜೆ: ಮನೆ ಹಸ್ತಾಂತರ

ಇನ್ನಂಜೆ, ಡಿ.21: ರೋಟರಿ ಸಮುದಾಯ ದಳ ಇನ್ನಂಜೆ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ...

ಯಕ್ಷಗಾನ ಕಲಾರಂಗ (ರಿ.) ಉಡುಪಿ: ಮನೆ ಹಸ್ತಾಂತರ

ಉಡುಪಿ, ಡಿ.21: ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ವತಿಯಿಂದ ದಾನಿಗಳ...
error: Content is protected !!