Home ಉದ್ಯೋಗಾವಕಾಶ ಅ.10: ತೆಂಕನಿಡಿಯೂರು ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

ಅ.10: ತೆಂಕನಿಡಿಯೂರು ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

744
0

ಮಲ್ಪೆ, ಅ.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ಅಕ್ಟೋಬರ್ 10 ರಂದು ಮಂಗಳೂರಿನ ಪ್ರತಿಷ್ಠಿತ ಗ್ಲೋ ಟಚ್ ಟೆಕ್ನಾಲಜೀಸ್ ನೇರ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ ನಡೆಸಲಿದೆ. ಈಗಾಗಲೇ B.Sc, BCA, MCA, M.Sc,BE) (Except Civil, Mechanical), B.Com (Computer Application) ಮುಗಿಸಿಕೊಂಡಿರುವ ಅಭ್ಯರ್ಥಿಗಳು ಪೂರ್ವಾಹ್ನ ೯.೩೦ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಆ್ಯಪ್ಟಿಟ್ಯೂಡ್ ಪರೀಕ್ಷೆ, ಪ್ರಬಂಧ ರಚನೆ, ಟೈಪಿಂಗ್ ಸಂದರ್ಶನ ನಡೆಸಲಾಗುವುದು.

ಆಸಕ್ತರು https://forms.gle/nM29Z3fRjbdqeo3R7 ಈ ಲಿಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಕಂಪನಿಯಲ್ಲಿ 2500 ರಷ್ಟು ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದು ಕಂಪನಿಗೆ ಆಯ್ಕೆಯಾಗಲು ಉತ್ತಮ ಅವಕಾಶವಾಗಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ಉಮೇಶ್ ಪೈ (ಮೊಬೈಲ್ ಸಂಖ್ಯೆ: 9480265511) ಇವರನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.