ವಿಶ್ವ ಸಂಸ್ಥೆಯ ವರದಿ ಪ್ರಕಾರ 2020 ರಲ್ಲಿ ಭಾರತಕ್ಕೆ 64 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಬಂದಿದೆ.
ಇದು ವಿಶ್ವದ ಐದನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಾಗಿದೆ. 2020 ರಲ್ಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆ 27 ಶೇಕಡಾ ಹೆಚ್ಚಾಗಿದೆ. 2019 ರಲ್ಲಿ 51 ಬಿಲಿಯನ್ ಡಾಲರ್‌ಗಳಿದ್ದ ವಿದೇಶಿ ನೇರ ಹೂಡಿಕೆ, 2020 ರಲ್ಲಿ 64 ಬಿಲಿಯನ್ ಡಾಲರ್‌ಗಳಿಗೆ ಏರಿದೆ.
ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಹೂಡಿಕೆ ವರದಿ 2021 ಪ್ರಕಾರ, ಜಾಗತಿಕ ಮಟ್ಟದಲ್ಲಿ ವಿದೇಶಿ ನೇರ ಹೂಡಿಕೆಗೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಲವಾದ ಪೆಟ್ಟು ಬಿದ್ದ ಪರಿಣಾಮ ವ್ಯಾಪಾರ ವಹಿವಾಟುಗಳು ತೀವ್ರವಾಗಿ ತತ್ತರಿಸಿವೆ. 2020 ರಲ್ಲಿ 35 ಪ್ರತಿಶತದಷ್ಟು ಕುಸಿತ ಕಂಡಿದ್ದು ಹಿಂದಿನ ವರ್ಷ 1.5 ಟ್ರಿಲಿಯನ್ ಡಾಲರ್‌ಗಳಿಂದ ಈ ವರ್ಷ 1 ಟ್ರಿಲಿಯನ್ ಡಾಲರ್‌ಗೆ ತಲುಪಿದೆ.