ನವದೆಹಲಿ: ಮಂಗಳವಾರ ಮಧ್ಯಾಹ್ನ 12.45 ಬಳಿಕ ವಾಟ್ಸಾಪ್ ಗ್ರಹಣ.. ಸಂದೇಶಗಳನ್ನು ಕಳುಹಿಸಲು ಆಗದೇ ಪರದಾಡಿದ ಜನರು..
ಹೌದು, ವಾಟ್ಸಾಪ್ ಸರ್ವರ್ ಡೌನ್ ಆಗಿದ್ದು, ಮೆಸೇಜ್ ಫೋಟೋ, ವಿಡಿಯೋ ಕಳಿಸಲಾಗದೇ ಸಾರ್ವಜನಿಕರು ಪರದಾಟ ನಡೆಸಿದರು.
ಈ ಅನುಭವ ಬಹುಶಃ ಪ್ರತಿಯೊಬ್ಬರಿಗೂ ಆಗಿರಬಹುದು. ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿ ಮೆಸೇಜ್ ಕಳಿಸಲು ಸಾಧ್ಯವಾಗದೇ ಬಳಕೆದಾರರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ವಾಟ್ಸಾಪ್ ಸ್ಥಗಿತಗೊಂಡ ಕಾರಣ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಈ ಸಮಸ್ಯೆಯು ವಿಶ್ವಾದ್ಯಂತ ವರದಿಯಾಗಿದೆ ಎಂದು ಟ್ವಿಟರ್ ನಲ್ಲಿ ಬಳಕೆದಾರರು ಹೇಳಿಕೊಂಡಿದ್ದಾರೆ.
ತಾಂತ್ರಿಕ ತೊಂದರೆಯಿಂದ ಸರ್ವರ್ ಡೌನ್ ಆಗಿ ಸಮಸ್ಯೆಯಾಗಿದ್ದು, ಜನರಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ, ಶೀಘ್ರದಲ್ಲಿ ಸರಿಪಡಿಸುವುದಾಗಿ ಮೆಟಾ ಸಂಸ್ಥೆಯ ವಕ್ತಾರರು ಹೇಳಿದ್ದರು. ಸುಮಾರು ಎರಡು ಗಂಟೆಗಳ ಕಾಲ ಡೌನ್ ಆಗಿದ್ದ ವಾಟ್ಸಾಪ್ ಮತ್ತೊಮ್ಮೆ ಉಸಿರಾಡಲು ಆರಂಭಿಸಿದೆ. ಕಳೆದ ವರ್ಷ ಇದೇ ರೀತಿ ಸಮಸ್ಯೆಯಾದ ಕಾರಣ ಅದೆಷ್ಟೋ ಮಂದಿ ಟೆಲಿಗ್ರಾಮ್ ಕಡೆಗೆ ವಾಲಿದ್ದರು.
ಕ್ಷಮೆಯಾಚಿಸಿದ ಮೆಟಾ: ಸಮಸ್ಯೆಯನ್ನು ಸರಿಪಡಿಸಿದ್ದೇವೆ. ಅಡಚಣೆಗಾಗಿ ಕ್ಷೆಮೆ ಯಾಚಿಸುತ್ತೇವೆ ಎಂದು ಮೆಟಾ ಅಧಿಕೃತ ಹೇಳಿಕೆ ನೀಡಿದೆ.