Saturday, July 25, 2026
Saturday, July 25, 2026

ಭಾರತೀಯ ವಾಯುಪಡೆಯ ಸುಖೋಯ್ ವಿಮಾನ ಅಪಘಾತ; 2 ಸಾವು

ಭಾರತೀಯ ವಾಯುಪಡೆಯ ಸುಖೋಯ್ ವಿಮಾನ ಅಪಘಾತ; 2 ಸಾವು

Date:

ಆಂಗ್ಲಾಂಗ್, ಮಾ.6: ಅಸ್ಸಾಂನಲ್ಲಿ, ಜೋರ್ಹತ್ ವಾಯುನೆಲೆಯಿಂದ ಸುಮಾರು 60 ಕಿ.ಮೀ ದೂರದಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಾಜನ್ ಉಪ ವಿಭಾಗದ ಇಂಗ್ಲಾಂಗ್ ಎಕೋಪಿ ಬೆಟ್ಟದಲ್ಲಿ ಭಾರತೀಯ ವಾಯುಪಡೆಯ ಸುಖೋಯ್-30MKI ಫೈಟರ್ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ. ಜೋರ್ಹತ್ ವಾಯುನೆಲೆ 47 ಸ್ಕ್ವಾಡ್ರನ್‌ನಿಂದ ಹೊರಟ ವಿಮಾನವು ಗುರುವಾರ ಸಂಜೆ 7:42 ಕ್ಕೆ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು. ಬೊಕಾಜನ್ ಉಪವಿಭಾಗದ ಚೋಕಿಹೋಲಾ ಗ್ರಾಮದ ಸ್ಥಳೀಯರು ಅಪಘಾತದ ಸ್ಥಳವನ್ನು ಮೊದಲು ಪತ್ತೆಹಚ್ಚಿದರು ಮತ್ತು ಅಪಘಾತಕ್ಕೀಡಾದ ಸ್ಥಳವನ್ನು ತಲುಪಿ ಮೃತ ದೇಹಗಳನ್ನು ಪತ್ತೆಹಚ್ಚಿದರು.

ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿ, ಅಧಿಕಾರಿಗಳ ಧೈರ್ಯ ಮತ್ತು ಸೇವೆಯನ್ನು ಸದಾ ಸ್ಮರಣೀಯವಾಗಿದೆ. ಈ ದುಃಖದ ಸಮಯದಲ್ಲಿ ದೇಶವು ಮೃತರ ಕುಟುಂಬಗಳೊಂದಿಗೆ ನಿಲ್ಲುತ್ತದೆ ಎಂದು ಸಂತಾಪ ಸೂಚಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!