Thursday, April 2, 2026
Thursday, April 2, 2026

ಮಳೆ ಹಾನಿಗೆ ಕೇಂದ್ರದಿಂದ ರಾಜ್ಯಕ್ಕೆ 629.03 ಕೋಟಿ ರೂ. ಪರಿಹಾರ ಬಿಡುಗಡೆ: ಶೋಭಾ ಕರಂದ್ಲಾಜೆ

ಮಳೆ ಹಾನಿಗೆ ಕೇಂದ್ರದಿಂದ ರಾಜ್ಯಕ್ಕೆ 629.03 ಕೋಟಿ ರೂ. ಪರಿಹಾರ ಬಿಡುಗಡೆ: ಶೋಭಾ ಕರಂದ್ಲಾಜೆ

Date:

ಉಡುಪಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕಳೆದ ವರ್ಷದಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 629.03 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ 701.00 ಕೋಟಿ ರೂ. ಗಳ ನೆರವಿನ ಅನುಮೋದನೆಯನ್ನು ಎಸ್.ಡಿ.ಆರ್.ಎಫ್ ಮಾನದಂಡಗಳ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ನಡೆದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಅನಾವೃಷ್ಟಿ ಕಾರಣದಿಂದ 2020 ನೇ ಸಾಲಿನಲ್ಲಿ ರಾಜಸ್ಥಾನದಲ್ಲಿನ ಕೃಷಿ ಸಮುದಾಯಕ್ಕೆ ಅಪಾರ ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರ ಸರಕಾರ ಈ ಬೆಳೆ ನಷ್ಟಕ್ಕೆ ನೆರವಿನ ರೂಪದಲ್ಲಿ 113.69 ಕೋಟಿ ರೂ. ಗಳನ್ನು ಎಸ್.ಡಿ.ಆರ್.ಎಫ್ ಮಾನದಂಡಗಳ ಅಡಿಯಲ್ಲಿ ಅನುಮೋದನೆ ನೀಡಿದೆ.

2020-21 ನೇ ವರ್ಷದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಒಟ್ಟು 67.96 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ವಿಮೆಗೆ ಒಳಪಡಿಸಲಾಗಿತ್ತು. ಈ ಸಾಲಿನ ಖಾರಿಫ್ ಮತ್ತು ರಬಿಯಲ್ಲಾದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಒಟ್ಟು 750.12 ಕೋಟಿ ರೂ.ಬಿಡುಗಡೆ ಮಾಡಿದ್ದು, 11.43 ಲಕ್ಷ ರೈತರು ಇದರ ಫಲಾನುಭವವನ್ನು ಪಡೆದಿರುವುದಾಗಿ ಸಚಿವೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾನವೀಯ ನೆರವಿನ ರೂಪದಲ್ಲಿ ಬುರ್ಕಿನಾ ಫಾಸೊಗೆ 1,000 ಮೆಟ್ರಿಕ್ ಟನ್ ಅಕ್ಕಿ

ನವದೆಹಲಿ, ಏ.2: ಭಾರತವು ಮಾನವೀಯ ನೆರವಿನ ರೂಪದಲ್ಲಿ ಬುರ್ಕಿನಾ ಫಾಸೊಗೆ ಒಂದು...

ಉಡುಪಿ: ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ

ಉಡುಪಿ, ಏ.2: ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ...

ಸಿಟ್ಟಿಗೊಂದು ಉಪಾಯ

ಕೆಲವರಿಗೆ ಯಾವಾಗಲೂ ಸಿಟ್ಟು, ಇನ್ನು ಕೆಲವರಿಗೆ ಸಿಟ್ಟು ಬರುವುದು ಅಪರೂಪ. ಇದರ...

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಪರೂಪ್ದ ಕಸಿ ಶಸ್ತ್ರಚಿಕಿತ್ಸೆ

ಮಣಿಪಾಲ, ಏ.1: ಕೆಎಂಸಿಯ ಬೋಧನಾ ಆಸ್ಪತ್ರೆ ಮತ್ತು ಮಾಹೆಯ ಘಟಕವಾದ ಕಸ್ತೂರ್ಬಾ...
error: Content is protected !!