ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣವಿರುವ ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಕೋಲಾರ, ಬೆಂಗಳೂರು ನಗರ, ಮಂಡ್ಯ, ಚಿಕ್ಕಬಳ್ಳಾಪುರ, ಗದಗ, ತುಮಕೂರು, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಮತ್ತು ಬೀದರ್ ಈ ಜಿಲ್ಲೆಗಳಿಗೆ ಇಂದಿನಿಂದ (ಜೂನ್ 21) ನಿರ್ಬಂಧಗಳನ್ನು ಸಡಿಲಿಕೆಗೊಳಿಸಲಾಗಿದ್ದು ಈ ಪಟ್ಟಿಯಲ್ಲಿ ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳನ್ನು ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ನಿರ್ಬಂಧ ಸಡಿಲಿಕೆ ಜುಲೈ 5ರಂದು ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಅನ್ವಯವಾಗಲಿದೆ.
ಈ ಜಿಲ್ಲೆಗಳಿಗೆ ಶನಿವಾರ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಈ ಕೆಳಕಂಡ ಪರಿಷ್ಕ್ರತ ಮಾರ್ಗಸೂಚಿಗಳು ಜೂನ್ 21 (ಇಂದಿನಿಂದ) ಜಾರಿಯಲ್ಲಿರುತ್ತದೆ.
1. ಎಲ್ಲಾ ಅಂಗಡಿಗಳು ಬೆಳಗ್ಗೆಯಿಂದ ಸಂಜೆ 5ರವರೆಗೆ ತೆರೆಯಬಹುದು.
2. ಎ.ಸಿ ಬಳಸದೆ ಹೊಟೇಲು, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕುಳಿತು ತಿನ್ನಲು ಅನುಮತಿ.
3. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
4. ಬಸ್, ಮೆಟ್ರೋ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಬಹುದು.
5. ವೀಕ್ಷಕರಿಲ್ಲದೆ ಕ್ರೀಡೆಗೆ ಅನುಮತಿ.
6. ಸರಕಾರಿ, ಖಾಸಗಿ ಕಛೇರಿಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ.
7. ಲಾಡ್ಜ್, ರೆಸಾರ್ಟ್ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಬಹುದು.
8. ಜಿಮ್ ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಅವಕಾಶ.
ರಾಜ್ಯವ್ಯಾಪಿ ಜೂನ್ 21 (ಇಂದಿನಿಂದ) ಅನ್ವಯವಾಗುವ ಮಾರ್ಗಸೂಚಿ:
1. ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚರಿಸಬಹುದು.
2. ಪ್ರತಿದಿನ ರಾತ್ರಿ 7ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ.
3. ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ.
ಇವುಗಳಿಗೆ ನಿರ್ಬಂಧ:
ಈಜುಕೊಳ, ಸಭೆ, ಸಮಾರಂಭಗಳು, ರಾಜಕೀಯ ಸಮಾವೇಶ, ಪೂಜಾಸ್ಥಳಗಳು, ಸಿನೆಮಾ, ಶಾಪಿಂಗ್ ಮಾಲ್, ಹವಾನಿಯಂತ್ರಿತ ಶಾಪಿಂಗ್ ಕಾಂಪ್ಲೆಕ್ಸ್, ಪಬ್, ಶಿಕ್ಷಣ ಸಂಸ್ಥೆಗಳು.