ಬೆಂಗಳೂರು, ಮಾ.23: ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ ಕಾರಕ ಎಂಬುದರ ಬಗ್ಗೆ ಸುದ್ದಿಗಳು ಹರಿದಾಡಿದ ಪರಿಣಾಮವಾಗಿ, ಈ ಬಗ್ಗೆ ಅಧ್ಯಯನ ನಡೆಸಲು ಎಂ. ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿತ್ತು. ಅಧ್ಯಯನ ವರದಿ ಪ್ರಕಾರ ಅಡಿಕೆ ಮತ್ತು ಅಡಿಕೆ ಹಾಳೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಮಧ್ಯಂತರ ವರದಿಯೂ ಇದನ್ನೇ ಹೇಳುತ್ತದೆ. ಆದರೆ, ದಿನಪೂರ್ತಿ ಅಡಿಕೆ ಜಗಿಯುವುದರಿಂದ ಕೆಲ ಸಮಸ್ಯೆಗಳಿವೆ ಎಂದೂ ಹೇಳಿದೆ. ಅಂತಿಮ ವರದಿ ಬಂದ ನಂತರ ಎಲ್ಲವು ಸ್ಪಷ್ಟವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಅಡಿಕೆ ಹಾನಿಕಾರಕವಲ್ಲ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಅಡಿಕೆ ಹಾನಿಕಾರಕವಲ್ಲ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
Date:




By
ForthFocus™