Thursday, September 19, 2024
Thursday, September 19, 2024

ಸಿದ್ದಲಿಂಗಯ್ಯನವರು ಸಾಹಿತ್ಯವನ್ನು ಸಾಮಾಜಿಕ ಬದಲಾವಣೆಯ ಅಸ್ತ್ರವನ್ನಾಗಿ ಮಾಡಿ ಸಮಾನತೆಯ ಹೋರಾಟ ಮುನ್ನಡೆಸಿದರು: ಸಿದ್ಧರಾಮಯ್ಯ

ಸಿದ್ದಲಿಂಗಯ್ಯನವರು ಸಾಹಿತ್ಯವನ್ನು ಸಾಮಾಜಿಕ ಬದಲಾವಣೆಯ ಅಸ್ತ್ರವನ್ನಾಗಿ ಮಾಡಿ ಸಮಾನತೆಯ ಹೋರಾಟ ಮುನ್ನಡೆಸಿದರು: ಸಿದ್ಧರಾಮಯ್ಯ

Date:

ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ಪ್ರಾಧ್ಯಾಪಕ, ವಿಧಾನಪರಿಷತ್ ನ ಮಾಜಿ ಸದಸ್ಯ ಹಾಗೂ ನನ್ನ ಬಹುಕಾಲದ ಮಿತ್ರ ಸಿದ್ದಲಿಂಗಯ್ಯನವರ ಸಾವು ನನ್ನ ಪಾಲಿಗೆ ಆಘಾತಕಾರಿಯಾದುದು ಮಾತ್ರವಲ್ಲ ಅನಿರೀಕ್ಷಿತವೂ ಹೌದು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸಣ್ಣ ಪ್ರಾಯದ ಕವಿ ಸಿದ್ದಲಿಂಗಯ್ಯನವರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಿದ್ದರು. ಆ ಕಾಲದಿಂದ ಸಿದ್ದಲಿಂಗಯ್ಯನವರು ನನಗೆ ಪರಿಚಿತರು.

ಹೊಲೆ ಮಾದಿಗರ ಹಾಡು ಕವನ ಸಂಕಲನದ ಮೂಲಕ ಆ ಕಾಲದಲ್ಲಿಯೇ ಮನೆಮಾತಾಗಿದ್ದ ಸಿದ್ದಲಿಂಗಯ್ಯನವರು, ಸಾಹಿತ್ಯವನ್ನು ಸಾಮಾಜಿಕ ಬದಲಾವಣೆಯ ಅಸ್ತ್ರವನ್ನಾಗಿ ಮಾಡಿ ಸಮಾನತೆಯ ಹೋರಾಟವನ್ನು ಮುನ್ನಡೆಸಿದವರು. ಕನ್ನಡ ಸಾಹಿತ್ಯದಲ್ಲಿ ದಲಿತ ಲೋಕವೊಂದನ್ನು ಅನಾವರಣಗೊಳಿಸಿದ ಬಂಡಾಯ ಸಾಹಿತ್ಯ ಚಳುವಳಿಯ ಸಾಹಿತಿಗಳಲ್ಲಿ ಸಿದ್ದಲಿಂಗಯ್ಯ ಪ್ರಮುಖರು. ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲೊಬ್ಬರಾಗಿದ್ದರು.

ಕೆಂಡದಂತಹ ಕವನಗಳನ್ನು ಬರೆಯುತ್ತಿದ್ದ ಸಿದ್ದಲಿಂಗಯ್ಯನವರು ವೈಯಕ್ತಿಕವಾಗಿ ಬಹಳ ಮೃದು ಸ್ವಭಾವದ ಮುಜುಗರದ ವ್ಯಕ್ತಿ. ತಾವಿದ್ದಲ್ಲಿ ತನ್ನ ಮಾತುಗಳ ಮೂಲಕವೇ ನಗು, ಸಂತೋಷ, ವಿನೋದದ ಲವಲವಿಕೆಯ ಲೋಕವನ್ನೇ ಅವರು ಸೃಷ್ಟಿಸುತ್ತಿದ್ದರು. ಸಿದ್ದಲಿಂಗಯ್ಯನವರು ಇನ್ನಿಲ್ಲವಾದರೂ ಅವರು ಬರೆದಿರುವ ಸಾಹಿತ್ಯದ ಮೂಲಕ ಸದಾ ನಮ್ಮ ನೆನಪಲ್ಲಿರುತ್ತಾರೆ. ಅವರ ಅಗಲಿಕೆಯ ದುಃಖದಲ್ಲಿರುವ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು, ಅವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!