ಯುವಕ ಮಂಡಲ (ರಿ.) ಸಾಣೂರು ಇದರ ವತಿಯಿಂದ ಸುಮಾರು 802 ಬಡ ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. ಕೊರೊನ ಸೋಂಕು ತಗುಲಿ ಹೋಮ್ ಐಶೂಲೇಷನ್ ನಲ್ಲಿ ಇದ್ದ ಸುಮಾರು 7 ಕುಟುಂಬಗಳಿಗೆ ದಿನಸಿ ಹಾಗೂ ಅಕ್ಕಿಯನ್ನು ಕೂಡ ವಿತರಿಸಲಾಯಿತು. ಸಾಣೂರು ಗ್ರಾಮ ಪಂಚಾಯತ್ ಗೆ ಡಿಜಿಟಲ್ ಥರ್ಮೋಮೀಟರ್ ಮತ್ತು ಪಲ್ಸ್ ಆಕ್ಸಿಮೀಟರ್ ಯುವಕ ಮಂಡಲದ ವತಿಯಿಂದ ನೀಡಲಾಯಿತು. ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಮುಂಚೂಣಿ ಕಾರ್ಯಕರ್ತರಾದ ಆಶಾ ಕಾರ್ಯಕರ್ತರನ್ನು ಮತ್ತು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತರಕಾರಿ ಹಾಗೂ ಅಕ್ಕಿಯನ್ನು ನೀಡಿ ಅವರ ಸೇವೆಯನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಧು ಎಮ್.ಸಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಸಾಣೂರು ಗ್ರಾಮ ಪಂಚಾಯತ್ ಸದಸ್ಯರು ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಯುವಕ ಮಂಡಲದ ಅಧ್ಯಕ್ಷರು ಆದ ಪ್ರಸಾದ್ ಪೂಜಾರಿ, ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಕುಮಾರ್, ಪ್ರಕಾಶ್ ಮಡಿವಾಳ, ಪ್ರವೀಣ್ ಶೆಟ್ಟಿ, ಶಂಕರ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಸದಸ್ಯರಾದ ಹರಿಂದ್ರ ಶೆಟ್ಟಿ, ಶಶಾಂಕ್ ಶೆಟ್ಟಿ, ದಿವಾಕರ್ ಶೆಟ್ಟಿ, ಜಗನಾಥ್ ಶೆಟ್ಟಿ, ಚೇತನ್.ಎಚ್.ಎಸ್, ಸುಹಾಸ್, ರತ್ನಾಕರ್, ಸ್ವಸ್ತಿಕ್, ಪ್ರವೀಣ್ ಶೆಟ್ಟಿ, ಶ್ರೇಯಸ್ ಶೆಟ್ಟಿ, ದಿಲೀಪ್, ಸಮಿತ್, ಪವನ್ ಶೆಟ್ಟಿ, ಗಣೇಶ್, ಅಜಿತ್, ಪ್ರಮಿತ್ ಸುವರ್ಣ, ವೈಭವ್, ಸೀತಾರಾಮ್, ಪ್ರಶಾಂತ್ ಆಚಾರ್ಯ, ಜಯಂತ್ ಎಸ್, ಜೋನ್ ಡಿ ಸಿಲ್ವ ದೀಪಕ್ ರಾವ್, ಪ್ರಸನ್ನ, ದೀಕ್ಷಿತ್ ಮೊದಲಾದವರು ಕಿಟ್ ವಿತರಣೆಯಲ್ಲಿ ಭಾಗವಹಿಸಿದರು.