ಯುವಕ ಮಂಡಲ ಸಾಣೂರು (ರಿ.) ಇದರ ವತಿಯಿಂದ ಸ್ವಚ್ಚ ಭಾರತದ ಪರಿಕಲ್ಪನೆಯಡಿ ಸಾಣೂರು ಗ್ರಾಮ ಪಂಚಾಯತ್ ನ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿಬ್ಬಂದಿಗಳ ಕೊರತೆಯಿಂದ ವಿಂಗಡಣೆ ಆಗದೆ ಉಳಿದಿರುವ ಕಸವನ್ನು ಯುವಕ ಮಂಡಲದ ಸದಸ್ಯರಿಂದ ಶ್ರಮದಾನದ ಮೂಲಕ ಭಾನುವಾರ ವಿಂಗಡಣೆ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಧು ಎಮ್.ಸಿ, ಪಂಚಾಯತ್ ಸದಸ್ಯರಾದ ಯುವರಾಜ್ ಜೈನ್, ಸರಸ್ವತಿ ಆಚಾರ್ಯ, ಪ್ರಮೀಳಾ, ಸುನಂದಾ ನಾಯ್ಕ್, ಪ್ರಕಾಶ್ ರಾವ್, ಪಂಚಾಯತ್ ಸಿಬ್ಬಂದಿ ಮಂಜುನಾಥ್, ಎಸ್.ಎಲ್.ಆರ್.ಎಮ್ ಸಿಬ್ಬಂದಿ ಅನ್ನಪೂರ್ಣ ಶ್ರಮದಾನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ಪ್ರಸಾದ್ ಪೂಜಾರಿ, ಮಂಡಲದ ಪ್ರದಾನ ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ದೇವಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಗದೀಶ್ ಕುಮಾರ್, ಸದಸ್ಯರಾದ ಶುಭಕರ್ ಶೆಟ್ಟಿ, ಪ್ರಸನ್ನ ಆಚಾರ್ಯ, ಅಬ್ದುಲ್ ದಿಲೀಪ್, ಮೊಹಮ್ಮದ್ ಹುಸೇನ್, ಅನಿಲ್ ಕೋಟ್ಯಾನ್, ಹರೀ0ದ್ರ ಶೆಟ್ಟಿ, ಜಯಂತ್ ಎಸ್, ಪ್ರಖ್ಯಾತ್, ಚೇತನ್ ಎಚ್ ಎಸ್, ಅಜಿತ್, ಶಶಾಂಕ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಸಮಿತ್, ರತ್ನಾಕರ್, ರಮೇಶ್ ಪೂಜಾರಿ ಮೊದಲಾದವರು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.