Thursday, October 1, 2026
Thursday, October 1, 2026

ವರ್ಡ್‌ಪ್ರೆಸ್ ಉಡುಪಿ ಕ್ಯಾಂಪಸ್ ಕನೆಕ್ಟ್ ಕಾರ್ಯಕ್ರಮ

ವರ್ಡ್‌ಪ್ರೆಸ್ ಉಡುಪಿ ಕ್ಯಾಂಪಸ್ ಕನೆಕ್ಟ್ ಕಾರ್ಯಕ್ರಮ

Date:

ಭಟ್ಕಳ, ಸೆ.23: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶನಿವಾರ ನಡೆದ ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ಕಾರ್ಯಕ್ರಮದಲ್ಲಿ ಸುಮಾರು 50 ಬಿಸಿಎ ವಿದ್ಯಾರ್ಥಿಗಳು ಪಾಲ್ಗೊಂಡರು. ವಿದ್ಯಾರ್ಥಿಗಳು ತಮ್ಮ ಮೊದಲ ಒನ್-ಪೇಜ್ ವೆಬ್‌ಸೈಟ್‌ನ್ನು ತಾವು ನಿರ್ಮಿಸುವ ಅನುಭವವನ್ನು ಪಡೆದರು.

ವರ್ಡ್‌ಪ್ರೆಸ್ ಉಡುಪಿ ಸಮುದಾಯದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಶಿಕಾಂತ್ ಶೆಟ್ಟಿ, ಕೆ. ಕೀರ್ತಿ ಪ್ರಭು ಮತ್ತು ವಿ. ಗೌತಮ್ ನಾವಡ ಅವರ ನೇತೃತ್ವದಲ್ಲಿ ನಡೆಸಲಾಯಿತು.

ನಮ್ಮ ಉದ್ದೇಶ ವಿದ್ಯಾರ್ಥಿಗಳಿಗೆ ವೆಬ್‌ನಲ್ಲಿ ಸೃಜನಶೀಲರಾಗುವ ಆತ್ಮವಿಶ್ವಾಸ ಮತ್ತು ಕೌಶಲ್ಯ ನೀಡುವುದು. ಇಂದು 50 ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್‌ಸೈಟ್ ನಿರ್ಮಿಸಿರುವುದನ್ನು ನೋಡುವುದು ತುಂಬಾ ಪ್ರೇರಣಾದಾಯಕ. ಈ ಕಾರ್ಯಕ್ರಮವನ್ನು ಇನ್ನಷ್ಟು ವಿದ್ಯಾಸಂಸ್ಥೆಗಳಿಗೆ ತಲುಪಿಸುವ ಗುರಿ ನಮ್ಮದು. ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ ಬಗ್ಗೆ ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ ಒಂದು ಸಮುದಾಯ ಆಧಾರಿತ ಯೋಜನೆ. ಜಗತ್ತಿನ 40% ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಚಲಾಯಿಸುತ್ತಿರುವ ಓಪನ್‌ಸೋರ್ಸ್ ವೇದಿಕೆಯಾದ ವರ್ಡ್‌ಪ್ರೆಸ್ನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಇದರ ಉದ್ದೇಶ. ಪ್ರಾಯೋಗಿಕ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳು ವೆಬ್ ಅಭಿವೃದ್ಧಿ ಕೌಶಲ್ಯಗಳನ್ನು ಸಂಪಾದಿಸಿ, ಡಿಜಿಟಲ್ ವಲಯದಲ್ಲಿ ವೃತ್ತಿ ಅವಕಾಶಗಳನ್ನು ಅರಿಯಲು ಇದು ನೆರವಾಗುತ್ತದೆ ಎಂದು ಶಶಿಕಾಂತ್ ಶೆಟ್ಟಿ ಹೇಳಿದರು.

ಕಾರ್ಯಗಾರದರ ಪ್ರಮುಖ ಮಾರ್ಗದರ್ಶಕ ಓಂಕಾರ್ ಉಡುಪ (ಸಿಇಒ, ಕೋಟಿಸಾಫ್ಟ್ ಸೊಲ್ಯೂಷನ್ಸ್, ಕೋಟೇಶ್ವರ) ಮತ್ತು ಮಂಜುನಾಥ್ ಎಂ. ಎಂ (ಸ್ಥಾಪಕ, ಯುಕ್ತಾ ಡಿಜಿಟಲ್ಸ್, ತೀರ್ಥಹಳ್ಳಿ) ಆಗಿದ್ದರು.

ಪ್ರಾಚಾರ್ಯ ಶ್ರೀನಾಥ ಪೈ, ಉಪಪ್ರಾಚಾರ್ಯ ವಿಖ್ಯಾತ್ ಪ್ರಭು, ಉಪಪ್ರಾಚಾರ್ಯ ವಿಷ್ಣುವರ್ಧನ್ ಭಟ್ ಮತ್ತು ತರಬೇತಿ ಮತ್ತು ನೇಮಕಾತಿ ಅಧಿಕಾರಿ ವಿನೇಶ್ ಪ್ರಭು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಸ್.ಆರ್.ಟಿ.ಸಿ: ಅ. 11 -20- ಉಡುಪಿಯಿಂದ ನವರಾತ್ರಿ ವಿಶೇಷ ಪ್ಯಾಕೇಜ್ ಪ್ರವಾಸ

ಉಡುಪಿ, ಸೆ.30: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ...

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

ಹಿರಿಯಡಕ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ...

ಕೋಟೇಶ್ವರ: ವಿದ್ಯಾರ್ಥಿ ಸಂಘ ಉದ್ಘಾಟನೆ

ಕೋಟೇಶ್ವರ, ಸೆ.30: ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿ...

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

ಉಡುಪಿ, ಸೆ.30: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ...
error: Content is protected !!