Monday, May 4, 2026
Monday, May 4, 2026

ಜಂಪ್ ರೋಪಿಂಗ್ ಸ್ಪರ್ಧೆ: ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜಂಪ್ ರೋಪಿಂಗ್ ಸ್ಪರ್ಧೆ: ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Date:

ಉಡುಪಿ, ಸೆ.24: ಜಿಲ್ಲಾಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆ ಪಂದ್ಯಾವಳಿ ಬಾರಕೂರಿನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ನಡೆಯಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಜಯ ಗಳಿಸಿದ್ದಾರೆ.

ಜಾಹೀರಾತು/ Advertisement

ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿಸಿಎಂಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿಸಿಎಂಬಿ ವಿಭಾಗದ ಶ್ರೇಷ್ಠ ಎಸ್. ಗೋಲ್ಡ್ ಮೆಡಲ್, ಉಚಿತ ಶೈಲಿಯಲ್ಲಿ ಪ್ರಥಮ ಪಿಸಿಎಂಬಿ ವಿಭಾಗದ ಅನುಷ್ಕ ಮಹಾಂತೇಶ ಮುರ್ಗೋಡ್ ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆಯಲ್ಲಿ ಪ್ರಥಮ ಪಿ ಸಿ ಎಮ್ ಸಿ ವಿಭಾಗದ ಗುಂಡಲ ಶ್ರೀಗವಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಹುಡುಗರ ವಿಭಾಗದಲ್ಲಿ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ನಲ್ಲಿ ದ್ವಿತೀಯ ಪಿಸಿಎಂಬಿ ವಿಭಾಗದ ಅಭಿಷೇಕ್ ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆ ವಿಭಾಗದಲ್ಲಿ ದ್ವಿತೀಯ ಪಿಸಿಎಂಸಿ ವಿಭಾಗದ ಪೂಜಿತ್ ಕುಮಾರ್ ಚಿನ್ನದ ಪದಕಗಳೊಂದಿಗೆ ಜಯ ಗಳಿಸಿದ್ದು, ಸ್ವರ್ಣ ವಿಜೇತರು ರಾಜ್ಯಮಟ್ಟದ ಜಂಪ್ ರೋಪಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಶುಭ ಹಾರೈಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

error: Content is protected !!