ಉಡುಪಿ: ಅಲೆವೂರು ಚಿಟ್ಪಾಡಿಯಲ್ಲಿ ರಾತ್ರಿ ನಿರ್ಜನ ಪ್ರದೇಶದಲ್ಲಿ ಅಸಹಾಯಕಳಾಗಿದ್ದ ಮಹಾರಾಷ್ಟ್ರ ಮೂಲದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ನಗರ ಪೋಲಿಸ್ ಠಾಣೆಯ ಸಹಾಯದಿಂದ ಸಖಿ-ಒನ್-ಸ್ಟಾಪ್ ಸೆಂಟರ್ ಗೆ ದಾಖಲಿಸಿರುವ ಘಟನೆ ನಡೆದಿದೆ.
ಯುವತಿಯು ಮೀನಾ (26 ವ) ಮಹಾರಾಷ್ಟ್ರ ಮೂಲದವಳೆಂಬ ಮಾಹಿತಿ ನೀಡಿದ್ದಾಳೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ರಾತ್ರಿಯೇ ರಕ್ಷಣೆಯಾಗಿರುವುದರಿಂದ ಸಂಭಾವ್ಯ ದುರಂತವು ತಪ್ಪಿದೆ. ಯುವತಿ ಬರೀ ಕಾಲ್ನಡಿಗೆಯಲ್ಲಿ ನಡೆದು ಸುಸ್ತಾಗಿದ್ದಳು. ರಕ್ಷಣಾ ಸಂದರ್ಭದಲ್ಲಿ ತುರ್ತು ಆಹಾರ ನೀಡಿ ಆರೈಕೆ ಮಾಡಲಾಯಿತು.
ಸಂಬಂಧಿಕರು ಇದ್ದಲ್ಲಿ ನಗರ ಠಾಣೆ ಅಥವಾ ಸಖಿ-ಒನ್-ಸ್ಟಾಪ್ ಸೆಂಟರ್ ಗೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಮರ್ಣೆ ಗ್ರಾಮ ಪಂಚಾಯತ್ ಸದಸ್ಯ ಪ್ರಜ್ಪಲ್ ಹೆಗ್ಡೆ ಹಾಗೂ ಮಹಿಳಾ ಪೋಲಿಸ್ ರೂಪರವರು ಸಹಕರಿಸಿದರು.




By
ForthFocus™