Friday, March 20, 2026
Friday, March 20, 2026

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ವೃಕ್ಷಾರೋಪಣ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ವೃಕ್ಷಾರೋಪಣ

Date:

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಕ್ಲಬ್ಬಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದ, ಅನಿವಾಸಿ ಭಾರತೀಯ ಉದ್ಯಮಿ ಕೆಂಜೂರು ಶಶಿಧರ ಶೆಟ್ಟಿ ಅವರು ಗಿಡ ನೆಡುವ ಮೂಲಕ ವೃಕ್ಷಾರೋಪಣಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಮನೆಯ ಪರಿಸರದಲ್ಲಿ ಹಸಿರು ಪದರವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸಾಂಘಿಕ ಪ್ರಯತ್ನಗಳ ಅವಶ್ಯಕತೆಯಿದೆ ಎಂದರು. 100ಕ್ಕೂ ಹೆಚ್ಚು ಗಿಡಗಳನ್ನು ಕ್ಲಬ್ಬಿನ ಆವರಣದಲ್ಲಿ ನೆಡಲಾಯಿತು.

ಮುಂಬರುವ ದಿನಗಳಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇನ್ನಷ್ಟು ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಎಂ. ಚಂದ್ರಶೇಖರ ಹೆಗ್ಡೆ ಹೇಳಿದರು.

ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಗ್ರೆಗೊರಿ ಡಿಸಿಲ್ವ, ಸದಸ್ಯರಾದ ಜೇಮ್ಸ್ ಒಲಿವೆಯಿರ, ಜೋಸೆಫ್ ಸುವರೆಸ್, ಸುದೇಶ್ ಹೆಗ್ಡೆ, ಪ್ರಮೋದ್ ಶೆಟ್ಟಿ, ಪ್ರಸನ್ನ ಶೆಟ್ಟಿ, ವಿವೇಕ್ ಕರ್ನೇಲಿಯೋ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕತಾರ್ ದೊರೆಗೆ ಈದ್ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ, ಮಾ.20: ಪ್ರಧಾನಿ ನರೇಂದ್ರ ಮೋದಿ ಕತಾರ್ ದೊರೆ ಶೇಖ್ ತಮೀಮ್...

ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಯು.ಬಿ.ಎನ್.ಡಿ., ಮಾ.20: ಹೈಫಾದ ಉತ್ತರ ನಗರದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ...

ಬಂಟಕಲ್ಲು: ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಬಂಟಕಲ್ಲು, ಮಾ.20: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ಅನುದಾನಿತ ಹಿರಿಯ...

ರಥಬೀದಿ ಕಾಲೇಜು: ಮಹಿಳಾ ದಿನಾಚರಣೆ

ಮಂಗಳೂರು, ಮಾ.20: ಸಮಾಜದ ಕಟ್ಟುಪಾಡುಗಳ ಮಧ್ಯೆಯೇ ಛಲದಿಂದ ಮುನ್ನಡೆದು ಗುರಿ ಸಾಧಿಸಿದ...
error: Content is protected !!