Home ಸುದ್ಧಿಗಳು ಅಂತರಾಷ್ಟ್ರೀಯ ಚೀನಾ ನಿರ್ಮಿತ ಸೌರ ಉತ್ಪನ್ನಗಳನ್ನು ನಿಷೇಧಿಸಿದ ಅಮೆರಿಕ

ಚೀನಾ ನಿರ್ಮಿತ ಸೌರ ಉತ್ಪನ್ನಗಳನ್ನು ನಿಷೇಧಿಸಿದ ಅಮೆರಿಕ

448
0

ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಮೇರೆಗೆ ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ತಯಾರಿಸಿದ ಕೆಲವು ಸೌರ ಉತ್ಪನ್ನಗಳನ್ನು ಅಮೆರಿಕ ನಿರ್ಬಂಧಿಸಿದೆ. ಕ್ಸಿನ್‌ಜಿಯಾಂಗ್‌ನಿಂದ ಸೌರ ಫಲಕಗಳ ತಯಾರಿಕೆ ಪ್ರಕ್ರಿಯೆ ಮತ್ತು ಸರಬರಾಜು ಸಂದರ್ಭಗಳಲ್ಲಿ ಚೀನಾ, ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿದೆ. ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ವಿಚಾರ ಗಮನಕ್ಕೆ ಬಂದ ನಂತರ ಈ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಶ್ವೇತಭವನ ಮಾಹಿತಿ ನೀಡಿದೆ.

ಹೊಸದಾಗಿ ಘೋಷಿಸಲಾದ ಕ್ರಮಗಳಲ್ಲಿ, ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್, ಹೋಶೈನ್ ಸಿಲಿಕಾನ್ ಕಂಪನಿ ತಯಾರಿಸಿದ ಸಿಲಿಕಾ ಆಧಾರಿತ ಉತ್ಪನ್ನಗಳ ಆಮದು ಮತ್ತು ಆ ಉತ್ಪನ್ನಗಳನ್ನು ಬಳಸಿ ತಯಾರಿಸಿದ ಸರಕುಗಳನ್ನು ನಿಷೇಧಿಸಿದೆ. ಅಮೆರಿಕ ವಾಣಿಜ್ಯ ಇಲಾಖೆಯು ಹೋಶೈನ್ ಸಿಲಿಕಾನ್ ಇಂಡಸ್ಟ್ರಿ (ಶನ್ಶನ್) ಕಂಪನಿ ಮತ್ತು ಇತರ ನಾಲ್ಕು ಚೀನೀ ಘಟಕಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ಕಾರ್ನ್‌ವಾಲ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ 7 ಶೃಂಗಸಭೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಾರ್ಮಿಕರ ಶೋಷಣೆಯನ್ನು ಕೊನೆಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗಳು ನಡೆದಿತ್ತು. ಚೀನಾದ ಬಲವಂತದ ಕಾರ್ಮಿಕ ಪದ್ಧತಿಗಳು ಅಮೆರಿಕನ್ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.