Home ಸುದ್ಧಿಗಳು ಪ್ರಾದೇಶಿಕ ಸಂಸ್ಕೃತಿ ವಿಶ್ವ ಪ್ರತಿಷ್ಠಾನ: ವಿಶ್ವ ಕಲಾ ಸಂಭ್ರಮ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ: ವಿಶ್ವ ಕಲಾ ಸಂಭ್ರಮ

399
0

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಪ್ರಸ್ತುತಿಯಲ್ಲಿ ಈ ಸಮುದಾಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಸ್ಥಳೀಕರಣ ದಿನಾಚರಣೆಯ ಪ್ರಯುಕ್ತ 5 ದಿನಗಳ ಕಾಲ ಆನ್ಲೈನ್ನಲ್ಲಿ ‘ವಿಶ್ವ ಕಲಾ ಸಂಭ್ರಮ’ ವನ್ನು ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾಗಳಾದ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಸ್ಥಳೀಯ ಕಲಾವಿದರಾಗಿದ್ದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಜಾದುಗಾರ ಜೂನಿಯರ್ ಶಂಕರ್, ನಟಿ ಮಾನಸಿ ಸುಧೀರ್, ರೂಬಿಕ್ ಕ್ಯೂಬ್ ಸಾಧಕ ಪೃಥ್ವೀಶ ಭಟ್, ಯೋಗಪಟು ತನುಶ್ರೀ ಪಿತ್ರೋಡಿ ಭಾಗವಹಿಸಲಿದ್ದಾರೆ.

ಈ ಕಲಾ ಸಂಭ್ರಮ ಜೂನ್ 16ರಿಂದ 20ರವರೆಗೆ ಪ್ರತಿದಿನ ಸಂಜೆ ಆರರಿಂದ Samskruthi Vishwa ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.