ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಭಾರತೀಯ ಜನೌಷಧಿ ಕೇಂದ್ರದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜನೌಷಧಿ ಕೇಂದ್ರ ಪರಿಸರದಲ್ಲಿ ನಡೆಯಿತು. ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ವಲಯ ಅರಣ್ಯಧಿಕಾರಿಗಳಾದ ರವೀಂದ್ರ ಆಚಾರ್, ನವೀನ್ ಕೆ, ವೈದ್ಯರುಗಳಾದ ಡಾ. ಮಹೇಶ್ ಐತಾಳ, ಡಾ. ಮಹಾಬಲ ಕೆ.ಎಸ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಶ್ರೀನಾಥ್ ಕೋಟ, ರಾಘವೇಂದ್ರ ಪ್ರಭು ಕರ್ವಾಲು, ಮಿಲ್ಟನ್ ಒಲಿವರ್, ವಿವೇಕ್ ಶೆಣೈ, ರಂಗ ನಿರ್ದೇಶಕ ರವಿರಾಜ್ ಹೆಚ್.ಪಿ, ಮುಂತಾದವರಿದ್ದರು.
ಬ್ರಹ್ಮಾವರ: ವನಮಹೋತ್ಸವ ಮತ್ತು ಸಸಿ ವಿತರಣೆ

ಬ್ರಹ್ಮಾವರ: ವನಮಹೋತ್ಸವ ಮತ್ತು ಸಸಿ ವಿತರಣೆ
Date: