ಉಡುಪಿ: ಪೇಜಾವರ ಶ್ರೀಪಾದರು ಜೀವನಪೂರ್ತಿ ಪರಿಶುದ್ದ ಸನ್ಯಾಸತ್ವ ಸ್ವೀಕರಿಸಿ ಅಸ್ಪ್ರಶ್ಯತೆ ವಿರುದ್ದ ಕ್ರಾಂತಿಕಾರಿ ಹೆಜ್ಜೆ ಇಟ್ಟ ಮಹಾಪುರುಷ. ಅಯೋಧ್ಯೆಯಲ್ಲಿ ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀಕ್ರಷ್ಣನ ಇನ್ನೊಂದು ಅವತಾರ ಹಿಂದೂಗಳ ಅರಾಧ್ಯ ದೈವ ಬಿಳಿಗಿರಿರಂಗನ ಬಗ್ಗೆ ಹಗುರವಾಗಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಯನ್ನು ಗೋವಿಗಾಗಿ ಮೇವು ಸಂಘಟನೆ ಖಂಡಿಸುತ್ತದೆ.
ಹಂಸಲೇಖ ಅವರ ಅವಿವೇಕಿತನದ ಹೇಳಿಕೆ ಸಮಸ್ಥ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ. ತಕ್ಷಣವೇ ಅವರು ಉಡುಪಿ ಶ್ರೀಕ್ರಷ್ಣನ ಸನ್ನಿದಾನ ಇಲ್ಲವೇ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದು ಸಾರ್ವಜನಿಕ ಕ್ಷಮೆಯಾಚಿಸದಿದ್ದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.