ಉಡುಪಿ, ಸೆ.10: ಶ್ರೀ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪ್ರಥಮ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಮುಂಬಯಿ ನಗರದಲ್ಲಿರುವ ಕರ್ಣಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿಗೆ ಆಗಮಿಸಿದರು. ಶೀರೂರು ಮಠದ ಭಾವೀ ಪರ್ಯಾಯ ಮಹೋತ್ಸವದ ಯಶಸ್ಸಿಗೆ ಕರ್ಮ ಭೂಮಿ ಮುಂಬಯಿಯಲ್ಲಿ ಬದುಕು ಕಟ್ಟಿಕೊಂಡಿರುವ ಕರ್ಣಾಟಕ ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರೀಪಾದರು ಆಶೀರ್ವಚನ ಫಲ ನೀಡಿ ಅನುಗ್ರಹಿಸಿದರು.
ಕರ್ಣಾಟಕ ಬ್ಯಾಂಕಿನ ವತಿಯಿಂದ ಪ್ರಾದೇಶಿಕ ಕಛೇರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ರಾಜಗೋಪಾಲ ಬಿ., ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಅನಿಲ ಕೌಶಿಕ್ ಬಿ ಎ., ಉಪ ಪ್ರಾದೇಶಿಕ ಮುಖ್ಯಸ್ಥರಾದ ಸತ್ಯರಮೇಶ ಸಿ ಎಚ್., ಕರ್ಣಾಟಕ ಬ್ಯಾಂಕಿನ ಇತರ ಮುಖ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಛೇರಿಯ ಸಿಬ್ಬಂದಿ ವರ್ಗ, ಬ್ಯಾಂಕಿನ ಮುಂಬೈ ಮಹಾನಗರದ ಶಾಖೆಗಳ ಶಾಖಾ ವ್ಯವಸ್ಥಾಪಕರು ಹಾಗೂ ಶ್ರೀಮಠದ ವತಿಯಿಂದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ, ಕಾರ್ಯದರ್ಶಿ ಮೋಹನ್ ಭಟ್, ಪಾರುಪತ್ಯದಾರರಾದ ಶ್ರೀಶ ಭಟ್, ಪರ್ಯಾಯ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




By
ForthFocus™