ಉಡುಪಿ: ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ-2021ರ ಅಭಿಯಾನದ ಅಂಗವಾಗಿ ಉಡುಪಿ ನಗರಸಭೆಯ ವಿವಿಧ ಘಟಕದಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಗಿಡ ಮೂಲಿಕೆ, ಹಣ್ಣು ಹಂಪಲು ಹಾಗೂ ಇತರ ಗಿಡಗಳನ್ನು ನೆಟ್ಟು ಪೋಷಿಸಲು ಕ್ರಮ ಕೈಗೊಳ್ಳಲಾಗಿದ್ದು, ನಿಟ್ಟೂರಿನಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಗಿಡ ಮೂಲಿಕೆ ಹಾಗೂ ಹಣ್ಣು ಹಂಪಲು ಗಿಡಗಳನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ನೆಟ್ಟು ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ 2021ರ ಅಭಿಯಾನಕ್ಕೆ ಚಾಲನೆ ನೀಡಿ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪಾರಂಪರಿಕ ಸ್ಥಳ / ವೃಕ್ಷ, ಪಕ್ಷಿಧಾಮ ಹಾಗೂ ಔಷಧಿಯ ಗುಣ ಹೊಂದಿರುವ ಗಿಡಗಳನ್ನು ರಕ್ಷಿಸುವಂತೆ ಕರೆ ನೀಡಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್, ಕೃಷ್ಣರಾವ್ ಕೊಡಂಚ, ಚಂದ್ರ ಅಂಚನ್, ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ರಾಜ್, ಪರಿಸರ ಅಭಿಯಂತರ ರವಿ ಪ್ರಕಾಶ್, ಕಂದಾಯ ಅಧಿಕಾರಿ ಧನಂಜಯ ಡಿ ಬಿ, ಆರೋಗ್ಯ ನಿರೀಕ್ಷಕರಾದ ಕರುಣಾಕರ ವಿ, ಶಶಿರೇಖಾ ಮತ್ತಿತರರು ಉಪಸ್ಥಿತರಿದ್ದರು.