ಕಾರ್ಕಳ: ಪೌರಕಾರ್ಮಿಕರ ದಿನದ ಪ್ರಯುಕ್ತ ಯೂತ್ ಫಾರ್ ಸೇವಾ ವತಿಯಿಂದ ಕಾರ್ಕಳದ ಎಂ.ಆರ್.ಎಫ್ ಪದವು ಇಲ್ಲಿ ನಿರಂತರವಾಗಿ ಹಗಲು-ರಾತ್ರಿ ಕಸವನ್ನು ವಿಂಗಡನೆ ಮಾಡುವ ಪೌರಕಾರ್ಮಿಕರಿಗೆ ದಿನಸಿ ಆಹಾರದ ಕಿಟ್ ವಿತರಿಸುವ ಮೂಲಕ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಯೂತ್ ಫಾರ್ ಸೇವಾ ತಂಡದ ರಾಘವೇಂದ್ರ ಪ್ರಭು ಅವರು ಮಾತನಾಡುತ್ತಾ, ದೇಶದ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರ ಶ್ರಮ ವಿಶೇಷವಾದದ್ದು ಎಂದರು.
ರಮಿತಾ ಶೈಲೇಂದ್ರ ರವರು ಮಾತನಾಡುತ್ತಾ, ಪ್ರತಿಯೊಬ್ಬರೂ ಸಮಾಜಸೇವೆಯ ಮನೋಭಾವನೆಯನ್ನು ಮೈಗೂಡಿಸಿಕೊಂಡರೆ ರಾಷ್ಟ್ರನಿರ್ಮಾಣಕ್ಕೆ ಇಂಧನ ಸಿಗುವುದು ಎಂದರು. ಯೂತ್ ಫಾರ್ ಸೇವಾದ ಉದ್ದೇಶ, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ರಾಮಕೃಷ್ಣ ಮಿಷನ್ ನಿರ್ದೇಶಕರಾದ ಸಚಿನ್ ಶೆಟ್ಟಿಯವರು ಸ್ವಾಗತಿಸಿ, ಯೂತ್ ಫಾರ್ ಸೇವಾ ಸದಸ್ಯೆ ಚಂದ್ರಿಕಾ ವಂದನಾರ್ಪಣೆಗೈದರು. ಎಂ.ಆರ್.ಎಫ್ ಘಟಕದ ಅಮರ್ ಜನಕರ್, ಹೇಮಂತ್ ಮುಡಿಪು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.