Sunday, November 15, 2026
Sunday, November 15, 2026

ಇನ್ನಂಜೆ: ವಿವಿಧ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ; ಉದ್ಘಾಟನೆ

ಇನ್ನಂಜೆ: ವಿವಿಧ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ; ಉದ್ಘಾಟನೆ

Date:

ಕಾಪು, ನ.15: ಕಾಪು ವಿಧಾನಸಭಾ ಕ್ಷೇತ್ರದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 55 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಹಾಗೂ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಯ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.

ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡುಂಬು ಅಜಿಲಕಾಡು ರಸ್ತೆ ಅಭಿವೃದ್ಧಿ – 50 ಇದರ ಉದ್ಘಾಟನೆ ನೆರವೇರಿಸಿ ಉಂಡಾರು ಜಾನಕಿ ಕುಲಾಲ್ ಮನೆ ಬಳಿ ರಸ್ತೆ ಸಹಿತ ಸೇತುವೆ ನಿರ್ಮಾಣ – 20 ಲಕ್ಷ, ಮುಡುಂಬು ಶ್ರೀ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿ – 05 ಲಕ್ಷ ಕಲ್ಯಾಲು ಶಿವ ಆಚಾರ್ಯ ಮನೆ ಬಳಿ ರಸ್ತೆ ಅಭಿವೃದ್ಧಿ – 05 ಲಕ್ಷ, ಪಾಂಗಾಳ 1ನೇ ವಾರ್ಡಿನ ಗೋಪಾಲ ಪೂಜಾರಿ ಮನೆ ಬಳಿಯಿಂದ ಮೀರಾ ಶೆಟ್ಟಿ ಮನೆ ತನಕ ರಸ್ತೆ ಅಭಿವೃದ್ಧಿ – 20 ಲಕ್ಷ, ಪಾಂಗಾಳ 1ನೇ ವಾರ್ಡಿನ ಕೊಟ್ಟಾರಿ ಮನೆಯಿಂದ ಶ್ರೀಧರ್ ಅಮೀನ್ ಮನೆ ತನಕ ರಸ್ತೆ ಅಭಿವೃದ್ಧಿ – 05 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 55 ಲಕ್ಷ ರೂಪಾಯಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಮಾಲಿನಿ ಶೆಟ್ಟಿ ಮಾಜಿ ಅಧ್ಯಕ್ಷರು ಇನ್ನಂಜೆ ಗ್ರಾಮ ಪಂಚಾಯತ್, ಮಾಜಿ ಉಪಾಧ್ಯಕ್ಷರು ಇನ್ನಂಜೆ ಗ್ರಾಮ ಪಂಚಾಯತ್ ಸುರೇಖಾ ಶೆಟ್ಟಿ, ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಯಾದ ಕೇಸರಿ ಯುವರಾಜ್, ಪ್ರವೀಣ್ ಶೆಟ್ಟಿ ಪಾಂಗಾಳ ಇನ್ನಂಜೆ ಶಕ್ತಿ ಕೇಂದ್ರ ಅಧ್ಯಕ್ಷರು, ಮಾಜಿ ಸದಸ್ಯರು ಗಳಾದ ದಿವೇಶ್ ಶೆಟ್ಟಿ, ಮಡುಂಬು ಮಹಾ ಗಣಪತಿ ದೇವಸ್ಥಾನದ ಜನಾರ್ಧನ್ ಭಟ್, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನಿತೇಶ್ ಸಾಲಿಯಾನ್, ಸವಿತಾ ಶೆಟ್ಟಿ, ಸುಭಾಸ್ ಚಂದ್ರ ಅಮೀನ್, ವಾರ್ಡ್ ಅಧ್ಯಕ್ಷರುಗಳಾದ ಶೈಲೇಶ್ ಶೆಟ್ಟಿ ಪಾಂಗಳ, ರಾಜೇಶ್ ಕುಲಾಲ್, ಪ್ರಮುಖರು ಆದ ವಿಶ್ವನಾಥ್ ಆಚಾರ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯರು ನವೀನ್ ಅಮೀನ್ ಶಂಕರಪುರ, ಲಕ್ಷಣ ಪೂಜಾರಿ, ರವಿ ಆಚಾರ್ಯ, ವಿಶ್ವನಾಥ್ ಆಚಾರ್ಯ,ಹಿಂದುಳಿದ ಮೋರ್ಚಾ ಪದಾಧಿಕಾರಿಯಾದ ಸುಧಾಕರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಸಂಪೂರ್ಣ ಸಾಕ್ಷರತಾ ಜಿಲ್ಲೆ ಗೌರವಕ್ಕೆ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊಡುಗೆ ಅಪಾರ: ಯಶ್ಪಾಲ್ ಸುವರ್ಣ

ಉಡುಪಿ, ನ. 15: ವಿಶ್ವದಲ್ಲಿಯೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ರಾಷ್ಟ್ರ...

ಹಾವಂಜೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬ್ರಹ್ಮಾವರ, ನ.15: ಕೆ. ಜಿ. ರೋಡ್ ಪೆರ್ಡೂರು ರಾಜ್ಯ ಹೆದ್ದಾರಿಯ ಹಾವಂಜೆ...

ವಿಶ್ವಪ್ರಭಾ ಸಭಾಂಗಣ ಉದ್ಘಾಟನೆ

ಉಡುಪಿ, ನ.15: ಯಕ್ಷಗಾನ ಕಲಾರಂಗ ಐ.ವೈ.ಸಿ. ಕಟ್ಟಡದ ಎರಡನೆ ಮಹಡಿಯಲ್ಲಿ ಪ್ರಭಾ...

ಥಾಯ್ಲೆಂಡ್‌ನ ಅಂತಾರಾಷ್ಟ್ರೀಯ ಹೃದ್ರೋಗ ಸಮ್ಮೇಳನಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ನೇರ ಪ್ರಸಾರ

ಮಣಿಪಾಲ, ನ.15: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗವು ಅಂತಾರಾಷ್ಟ್ರೀಯ ಲೈವ್...
error: Content is protected !!