Friday, November 6, 2026
Friday, November 6, 2026

ಎಂಜಿಎಂ ಸಂಧ್ಯಾ ಕಾಲೇಜು: ‘ಮೌಲ್ಯ ಚಿಂತನಾ ಶಿಬಿರ’

ಎಂಜಿಎಂ ಸಂಧ್ಯಾ ಕಾಲೇಜು: ‘ಮೌಲ್ಯ ಚಿಂತನಾ ಶಿಬಿರ’

Date:

ಉಡುಪಿ, ನ.4: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿ ಇದರ ವತಿಯಿಂದ ಪಂಚಮ ವರ್ಷಾಚರಣೆ ಕಾರ್ಯಕ್ರಮ ಸರಣಿ 3ರ ಅಂಗವಾಗಿ ‘ಮೌಲ್ಯ ಚಿಂತನಾ ಶಿಬಿರ’ವನ್ನು ಅಕ್ಟೋಬರ್ 31ರಂದು ಕಾಲೇಜಿನ ಅಮೃತ ಮಹೋತ್ಸವದ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಶ್ರೀ ಯುಗೇಶಾನಂದಜಿ ಉದ್ಘಾಟಿಸಿದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಆರ್. ಪೈ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ, ಉಪಪ್ರಾಂಶುಪಾಲರು ಹಾಗೂ ಬಿಸಿಎ ಸಂಯೋಜಕರಾದ ಡಾ. ಎಂ. ವಿಶ್ವನಾಥ ಪೈ, ಬಿಕಾಂ, ಬಿಬಿಎ ಸಂಯೋಜಕರಾದ ಡಾ. ಮಲ್ಲಿಕಾ ಎ ಶೆಟ್ಟಿ ಮಾಲತಿ ದೇವಿ ಪ್ರಾಂಶುಪಾಲರು ಎಂ ಜಿ ಎಂ ಪದವಿಪೂರ್ವ ಕಾಲೇಜು, ಟಿ ಮೋಹನದಾಸ್ ಪೈ ಕೌಶಲ್ಯ ಕೇಂದ್ರದ ನಿರ್ದೇಶಕರಾದ ಟಿ.ರಂಗ.ಪೈ ಉಪಸ್ಥಿತರಿದ್ದರು.

ಮಹಾತ್ಮ ಗಾಂಧಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಥಮ ಗೋಷ್ಠಿಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪತ್ರಕರ್ತರಾದ ಡಾ. ನರೇಂದ್ರ ರೈ ದೇರ್ಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಶಿಕ್ಷಣ-ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣವು ಕೇವಲ ಅಂಕಗಳಿಕೆ ಮತ್ತು ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ವ್ಯಕ್ತಿಯ ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ತಮ್ಮ ವಿಚಾರಗಳ ಮೂಲಕ ತಿಳಿಸಿದರು.

ದ್ವಿತೀಯ ಗೋಷ್ಠಿಯಲ್ಲಿ ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಓ. ಆರ್. ಪ್ರಕಾಶ್ ಅವರು ‘ಜೀವನ ಕೌಶಲಗಳು – ಪ್ರಕರಣ ಅಧ್ಯಯನ’ ಎಂಬ ವಿಷಯದ ಕುರಿತು ಮಾತನಾಡಿದರು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸ, ಧೈರ್ಯ ಮತ್ತು ಸಕಾರಾತ್ಮಕ ಮನೋಭಾವದಿಂದ ಎದುರಿಸುವ ಅಗತ್ಯವನ್ನು ವಿವರಿಸಿದರು. ಸಂವಾದ ಕಾರ್ಯಕ್ರಮದಲ್ಲಿ ‘ಸ್ಪರ್ಧಾತ್ಮಕ ಜಗತ್ತು– ಮೌಲ್ಯಗಳ ಮಹತ್ವ’ ಎಂಬ ವಿಷಯದ ಕುರಿತು ಚರ್ಚೆ ನಡೆಯಿತು. ಪ್ರೊ. (ಡಾ.) ವರದೇಶ ಹಿರೇಗಂಗೆ ಅವರು ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು. ಡಾ. ಗಣನಾಥ ಎಕ್ಕಾರ್ ಹಾಗೂ ಡಾ. ಪಾರ್ವತಿ ಜಿ. ಅವರು ಸಂವಾದದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾಲ್ಕು ರಾಷ್ಟ್ರಗಳ ನೌಕಾಪಡೆಗಳೊಂದಿಗೆ ಐಎನ್ಎಸ್ ಸಹ್ಯಾದ್ರಿ

ನವದೆಹಲಿ, ನ.5: ಭಾರತೀಯ ನೌಕಾಪಡೆಯ ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿ ಸ್ಟೆಲ್ತ್ ಫ್ರಿಗೇಟ್,...

ಗಯಾನಾದಲ್ಲಿ ರಸ್ತೆ, ಆರೋಗ್ಯ ಮತ್ತು ರಕ್ಷಣಾ ಯೋಜನೆಗಳಿಗಾಗಿ 500 ಮಿಲಿಯನ್ ಡಾಲರ್ ಸಾಲ ಸೌಲಭ್ಯವನ್ನು ಘೋಷಿಸಿದ ಭಾರತ

ನವದೆಹಲಿ, ನ.5: ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್....

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಫರ್ಧೆ

ಉಡುಪಿ, ನ.5: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿಯ ಬ್ರಹ್ಮಗಿರಿಯ...

ತೆಂಗಿನ ತೋಟಗಳ ಪುನಶ್ಚೇತನ ಕಾರ್ಯಕ್ರಮದಡಿ ಸಹಾಯಧನ

ಉಡುಪಿ, ನ.5: ಉಡುಪಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುತ್ಪಾದಕ...
error: Content is protected !!