Monday, September 21, 2026
Monday, September 21, 2026

ಭವಿಷ್ಯದ ಸಮಾಜವನ್ನು ರೂಪಿಸುವ ವಿದ್ಯಾರ್ಥಿ ಸಂಘಗಳ ಅಗತ್ಯವಿದೆ: ಶ್ರೀವರ್ಮ ಅಜ್ರಿ ಎಂ

ಭವಿಷ್ಯದ ಸಮಾಜವನ್ನು ರೂಪಿಸುವ ವಿದ್ಯಾರ್ಥಿ ಸಂಘಗಳ ಅಗತ್ಯವಿದೆ: ಶ್ರೀವರ್ಮ ಅಜ್ರಿ ಎಂ

Date:

ಹಿರಿಯಡಕ, ಸೆ.21: ಶೈಕ್ಷಣಿಕ ಉನ್ನತಿಯೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನೂ ಬೆಳೆಸುವ ಕಾಲೇಜು ವಿದ್ಯಾರ್ಥಿ ಸಂಘಗಳು ಭವಿಷ್ಯದ ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ರೂಪಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಎಂ ಅವರು ಹೇಳಿದರು. ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾದ ಸಹಮತದ ನಾಯಕತ್ವಗುಣದ ಜೊತೆಗೆ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಹೊಣೆಗಾರಿಕೆಯನ್ನು ಮರೆಯಬಾರದು ಎಂಬ ಕಿವಿಮಾತನ್ನೂ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್‌ ಅವರು ತಮ್ಮ ಬಲ ಮತ್ತು ಸಂಖ್ಯೆಗಿಂತ ಈ ದೇಶದ ಸಂವಿಧಾನವನ್ನು ಗೌರವಿಸುವ ಮೂಲಕ ಚರಿತ್ರೆಯ ಖಳನಾಯಕರಾಗದಂತೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ ಇವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ. ಎಂ. ಮತ್ತು ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷೆ ದೀಕ್ಷಾ ಹಾಗೂ ಉಪಾಧ್ಯಕ್ಷೆ ದೀಕ್ಷಾ ಮತ್ತು ಇತರ ವಿದ್ಯಾರ್ಥಿ ನಾಯಕರುಗಳು ಉಪಸ್ಥಿತರಿದ್ದರು. ಶ್ರಾವ್ಯ ಸ್ವಾಗತಿಸಿ, ವರ್ಷ ವಂದಿಸಿದರು, ಶಶಾಂಕ್‌ ಪೈ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರದ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್

ಉಡುಪಿ, ಸೆ.21: ನಮ್ಮ ಸರ್ಕಾರ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇದ್ದಲ್ಲಿಯೇ ಮಾಡಿಕೊಡಲು...

ತ್ರಿಶಾ ವಿದ್ಯಾ ಕಾಲೇಜು: ಡೇಟಾ ಅನಾಲಿಟಿಕ್ಸ್ ಮತ್ತು ಐಒಟಿ ವೃತ್ತಿಪರ ಕೋರ್ಸ್ ಕುರಿತು ಕಾರ್ಯಕ್ರಮ

ಕಟಪಾಡಿ, ಸೆ.21: ಕಾಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಡಾ. ರಾಮದಾಸ್ ಎಂ.ಪೈ ಜನ್ಮದಿನ: ಐವೈಸಿ ಸಭಾಂಗಣದ ನಿರ್ವಹಣೆಗಾಗಿ ದೇಣಿಗೆ ಹಸ್ತಾಂತರ

ಮಣಿಪಾಲ, ಸೆ.20: ಮಾಹೆಯ ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ.ಪೈ ಅವರ 91ನೇ...
error: Content is protected !!