Sunday, August 23, 2026
Sunday, August 23, 2026

ಜಾಗತಿಕ ಮಟ್ಟದ ರ್‍ಯಾಂಕಿಂಗ್- ಮಾಹೆ ಮತ್ತಷ್ಟು ಪ್ರಗತಿ; ದೇಶದಲ್ಲಿ 7ನೇ ಸ್ಥಾನ

ಜಾಗತಿಕ ಮಟ್ಟದ ರ್‍ಯಾಂಕಿಂಗ್- ಮಾಹೆ ಮತ್ತಷ್ಟು ಪ್ರಗತಿ; ದೇಶದಲ್ಲಿ 7ನೇ ಸ್ಥಾನ

Date:

ಮಣಿಪಾಲ, ಆ.22: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಜಾಗತಿಕ ಶೈಕ್ಷಣಿಕ ಮಟ್ಟದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದೆ. ಶಾಂಘೈ ರ್‍ಯಾಂಕಿಂಗ್ ಕನ್ಸಲ್ಟೆನ್ಸಿಯ 2026ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ (ಎಆರ್‌ಡಬ್ಲ್ಯುಯು) ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿದೆ. ಕಳೆದ ಬಾರಿ 801-900ರ ಶ್ರೇಣಿಯಲ್ಲಿದ್ದು ಇದೀಗ ಶೈಕ್ಷಣಿಕ ಹಾಗೂ ಸಂಶೋಧನಾ ವಲಯದ ತನ್ನ ನಿರಂತರ ಸಾಧನೆಯಿಂದಾಗಿ ವಿಶ್ವಮಟ್ಟದಲ್ಲಿ ತನ್ನ ಸ್ಥಾನದಲ್ಲಿ ಮತ್ತಷ್ಟು ಪ್ರಗತಿಕಂಡಿದೆ.

ಎಆರ್‌ಡಬ್ಲ್ಯುಯು ಟ್ರ್ಯಾಕರ್ ವಿಶ್ಲೇಷಣೆಯ ಪ್ರಕಾರ, ಮಾಹೆಯು ಜಾಗತಿಕವಾಗಿ 779ನೇ ಮತ್ತು ಭಾರತದಲ್ಲಿ 7ನೇ ಸ್ಥಾನದಲ್ಲಿದೆ. 2025ರ ರ್‍ಯಾಂಕಿಂಗ್‌ಗೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಮುನ್ನಡೆ ಸಾಧಿಸಿದೆ. ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಪ್ರಾಮುಖ್ಯಕ್ಕೆ ಈ ರ್‍ಯಾಂಕಿಂಗ್ ಕನ್ನಡಿಯಾಗಿದೆ. ಜ್ಞಾನದ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಭಿನ್ನ ಸಂಶೋಧನೆಗಳಿಗೆ ವಿವಿ ನೀಡುತ್ತಿರುವ ಪ್ರೋತ್ಸಾಹವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಈ ಬಗ್ಗೆ ಮಾತನಾಡಿ, ‘ಎಆರ್‌ಡಬ್ಲ್ಯುಯು ರ್‍ಯಾಂಕಿಂಗ್‌ನಲ್ಲಿನ ಈ ಮುನ್ನಡೆ ನಮ್ಮ ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಿಬ್ಬಂದಿಯ ಶ್ರಮದ ಫಲವಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ನಮಗೆ ಪ್ರೇರಣೆ ನೀಡಿದೆ. ರಾಷ್ಟ್ರ ನಿರ್ಮಾಣದ ಗುರಿ ಹೊಂದಿರುವ ಮಾಹೆಯು, ಜಾಗತಿಕ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳ ಮೂಲಕ ಸಮಾಜಕ್ಕೆ ಉತ್ತಮ ಪ್ರತಿಭೆಗಳನ್ನು ನೀಡುವ ಕಾಯಕವನ್ನು ನಿರಂತರವಾಗಿ ಮುಂದುವರಿಸಲಿದೆ’ ಎಂದು ಹೇಳಿದರು. 2026ರ ಈ ನೂತನ ರ್‍ಯಾಂಕಿಂಗ್ ಜಾಗತಿಕ ಮಟ್ಟದಲ್ಲಿ ಮಾಹೆ ಸಾಧಿಸುತ್ತಿರುವ ಸ್ಥಿರ ಪ್ರಗತಿಗೆ ಸಾಕ್ಷಿಯಾಗಿದೆ. ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಬಲಿಷ್ಠ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವ ವಿವಿಯ ಬದ್ಧತೆಗೆ ಇದು ಕಿರೀಟವಿಟ್ಟಂತಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿಂದುಳಿದ ವರ್ಗದವರ ಏಳಿಗೆಗೆ ಧ್ವನಿಯಾದವರು ದಿ. ದೇವರಾಜ ಅರಸು: ಎಂ.ಎ. ಗಫೂರ್

ಉಡುಪಿ, ಆ.21: ಸಾಮಾಜಿಕ ನ್ಯಾಯದ ಹರಿಕಾರ ದಿವಂಗತ ಡಿ. ದೇವರಾಜ ಅರಸು...

ಉಡುಪಿ: ಬ್ಯಾರಿಕೇಡ್‌ ಹಸ್ತಾಂತರ

ಉಡುಪಿ, ಆ.20: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು...

ಹಿರಿಯಡಕ: ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆ

ಹಿರಿಯಡಕ, ಆ.20: ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ಪ್ರಜಾಸತ್ತಾತ್ಮಕ ಹೊಣೆಗಾರಿಕೆಗಳನ್ನು...
error: Content is protected !!