Sunday, October 25, 2026
Sunday, October 25, 2026

ಬಾಳೆಹಣ್ಣು ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಕೆ: ಬಾಳೆಹಣ್ಣಿನ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

ಬಾಳೆಹಣ್ಣು ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಕೆ: ಬಾಳೆಹಣ್ಣಿನ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

Date:

ಉಡುಪಿ, ಆ.20: ಹಾನಿಕಾರಕ ರಾಸಾಯನಿಕಗಳನ್ನು ಬಳಸಿದ ಆಹಾರ ಪದಾರ್ಥಗಳಿಂದ ಕ್ಯಾನ್ಸರ್ ಇತ್ಯಾದಿ ಮಾರಕ ರೋಗಗಳು ಹೆಚ್ಚುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ವಿವಿಧೆಡೆ ಅಧಿಕಾರಿಗಳು ಆಹಾರ ಮಳಿಗೆಗಳ ಮೇಲೆ, ಹಣ್ಣು ತರಕಾರಿ ದಾಸ್ತಾನುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ವಿವಿಧೆಡೆ ಬಾಳೆಹಣ್ಣು ದಾಸ್ತಾನು ಗೋದಾಮುಗಳ ಮೇಲೆ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಎಸ್.ಆರ್ ನೇತೃತ್ವದಲ್ಲಿ ಅಲೆವೂರು ಕೆಮ್ತೂರಿನಲ್ಲಿ ಆರೋಗ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಬಾಳೆಹಣ್ಣನ್ನು ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಿ ರಾಸಾಯನಿಕ ಪರಿಕರಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮನುಷ್ಯನ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಇನ್ನೂ ಹಲವಾರು ಕಡೆಗಳಲ್ಲಿ ಹಣ್ಣುಗಳಿಗೆ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬ್ರ್ಯಾಂಡೆಡ್ ಆಹಾರ ಮಳಿಗೆಗಳಲ್ಲಿ ಸುರಕ್ಷಿತ ಆಹಾರ ಲಭ್ಯವಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮನೆ ಮಾಡಿದ್ದು ಇತ್ತೀಚೆಗೆ ಮಂಗಳೂರಿನಲ್ಲಿ ಆಹಾರ ಮಳಿಗೆ ಮೇಲೆ ಕಳಪೆ ಗುಣಮಟ್ಟದ ಎಷ್ಟೋ ತಿಂಗಳ ಹಿಂದಿನ ಆಹಾರ ಪತ್ತೆಯಾಗಿರುವುದು ಬ್ರ್ಯಾಂಡೆಡ್ ಆಹಾರ ಮಳಿಗೆಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಜನರು ಸಂಶಯ ಪಡುವಂತಾಗಿದೆ.

ಇನ್ನಾದರೂ ಜನರು ಎಚ್ಚೆತ್ತುಕೊಳ್ಳಬೇಕಿದೆ: ಬಾಳೆಹಣ್ಣುಗಳನ್ನು ಹಣ್ಣಾಗಿಸಲು, ಕೃತಕ ಬಣ್ಣ ಬರಲು ಜೀವಕ್ಕೆ ಹಾನಿಕಾರಕ ರಾಸಾಯನಿಕ ಬಳಸುವ ಅಕ್ರಮ ಗೋದಾಮುಗಳ ಬಗ್ಗೆ ಆಹಾರ ಇಲಾಖೆಯ ಅಧಿಕಾರಗಳ ಗಮನಕ್ಕೆ ತಂದು ಜನರ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.

ರಸ್ತೆ ಬದಿಯಲ್ಲಿ ವಾಹನಗಳಲ್ಲಿ ಬಂದು ವ್ಯಾಪಾರ ಮಾಡಿ ಹೋಗುವವರ ಬಳಿ ಆಹಾರ ಸುರಕ್ಷತೆ ಲೈಸನ್ಸ್ (ಎಫ್.ಎಸ್.ಎಸ್.ಎ.ಐ) ಇದೆಯೇ ಎಂಬುದನ್ನು ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಕೇವಲ ಅಧಿಕ ಹಣ ಗಳಿಸಲು ಜನರ ಆರೋಗ್ಯವನ್ನು ನಿರ್ಲಕ್ಷಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿಚಾರದ ಮೇಲೆಯೂ ಜಾಲತಾಣಗಳಲ್ಲಿ ಚರ್ಚೆಗಳು ನಡೆಯಿತ್ತಿವೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭೂತಾನ್‌ನ ಮೊಂಗಾರ್ ಜಿಲ್ಲೆಯಲ್ಲಿ ಭಾರತದ ಬೆಂಬಲದೊಂದಿಗೆ ಕೈಗೊಂಡ 15 ಸಮುದಾಯ ಯೋಜನೆಗಳ ಉದ್ಘಾಟನೆ

ನವದೆಹಲಿ, ಅ.24: ಭೂತಾನ್‌ನ ಪೂರ್ವ ಭಾಗದಲ್ಲಿರುವ ಮೊಂಗಾರ್ ಜಿಲ್ಲೆಯಲ್ಲಿ, ಭಾರತ ಸರ್ಕಾರದ...

ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 31ರವರೆಗೆ ಸೌದಿ ಅರೇಬಿಯಾಕ್ಕೆ ಇಂಡಿಗೋ ವಿಮಾನಯಾನ ರದ್ದು

ನವದೆಹಲಿ, ಅ.24: ಸೌದಿ ಅರೇಬಿಯಾದ ನಾಲ್ಕು ನಗರಗಳಿಗೆ ಮತ್ತು ಅಲ್ಲಿಂದ ಬರುವ...

2ನೇ ಟಿ20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ; ಸರಣಿಯಲ್ಲಿ 2-0 ಮುನ್ನಡೆ

ಯು.ಬಿ.ಎನ್.ಡಿ., ಅ.24: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಶನಿವಾರ ನಡೆದ ಎರಡನೇ ಟಿ20...

ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ, ಅ.24: ಉಡುಪಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ...
error: Content is protected !!