Tuesday, October 27, 2026
Tuesday, October 27, 2026

ದೇಶಪ್ರೇಮ ಮೈಗೂಡಿಸಿ, ಕೌಟುಂಬಿಕ ಮೌಲ್ಯಗಳಿಗೂ ಗೌರವಿಸುವ ಮನೋಭಾವ ಬೆಳೆಸಬೇಕು: ಬೈಕಾಡಿ ಸುಪ್ರಸಾದ್‌ ಶೆಟ್ಟಿ

ದೇಶಪ್ರೇಮ ಮೈಗೂಡಿಸಿ, ಕೌಟುಂಬಿಕ ಮೌಲ್ಯಗಳಿಗೂ ಗೌರವಿಸುವ ಮನೋಭಾವ ಬೆಳೆಸಬೇಕು: ಬೈಕಾಡಿ ಸುಪ್ರಸಾದ್‌ ಶೆಟ್ಟಿ

Date:

ಮಣಿಪಾಲ, ಆ.15: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಉಡುಪಿಯ ಪ್ರಖ್ಯಾತ ವಕೀಲರಾದ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಧ್ವಜಾರೋಹಣಗೈದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಜನತೆ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು, ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ವೀರರ ತ್ಯಾಗ ಬಲಿದಾನವನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸುವಂತಾಗಬೇಕು. ದೇಶಪ್ರೇಮವನ್ನು ಮೈಗೂಡಿಸಿ, ಕೌಟುಂಬಿಕ ಮೌಲ್ಯಗಳಿಗೂ ಗೌರವಿಸುವ ಮನೋಭಾವವನ್ನು ಬೆಳೆಸಬೇಕು ಎಂದರು. ಎನ್.ಸಿ.ಸಿ ಕೆಡೆಟ್ ಗಳು ಗೌರವ ವಂದನೆಯನ್ನು ಸಲ್ಲಿಸಿದರು. ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪ ಪ್ರಾಂಶುಪಾಲರುಗಳಾದ ರವಿ ಜಿ., ಹೇಮಂತ ಮತ್ತು ನವೀನ್‌ ಎ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಮಂಜುಳ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೊಂಟ ನೋವಿನಿಂದ ಬಳಲುವವರಿಗೆ ಉಚಿತ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಮಣಿಪಾಲ, ಅ.27: ಮುನಿಯಾಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ...

ಹೂವಿನ ಕೋಲು ಮತ್ತು ಯಕ್ಷಗಾನ ಪ್ರಾತ್ಯಕ್ಷಿಕೆ

ಕುಂದಾಪುರ, ಅ.27: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾಸಂಸ್ಥೆಗಳ ಆವರಣ ಮಂದರ್ತಿಯಲ್ಲಿ ನಡೆದ...

ಸಿಎ ಇಂಟರ್ಮಿಡಿಯೇಟ್ ಫಲಿತಾಂಶ: ತ್ರಿಶಾ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿರುವ ಸೆಪ್ಟೆಂಬರ್...
error: Content is protected !!